ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಪರೇಷನ್‌ ಯು’ ಚಿತ್ರೀಕರಣ ಅಕ್ಟೋಬರ್‌ನಿಂದ ಶುರು

Last Updated 13 ಸೆಪ್ಟೆಂಬರ್ 2022, 11:22 IST
ಅಕ್ಷರ ಗಾತ್ರ

ನಿರ್ದೇಶಕ ಅವಿರಾಮ್‌ ಅವರ ಹೊಸ ಸಿನಿಮಾ ಸೆಟ್ಟೇರಿದೆ. ‘ಆಪರೇಷನ್‌ ಯು’ ಚಿತ್ರದ ಹೆಸರು.ಉತ್ತಮ್ ಪಾಲಿ, ಯಶ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿದ್ದು, ಸೋನಲ್ ಮೊಂಥೆರೋ, ಲಾಸ್ಯಾ ನಾಗರಾಜ್ ನಾಯಕಿಯರು. ಈ ಚಿತ್ರದಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್‌ ಕೂಡಾ ಅಭಿನಯಿಸುತ್ತಿದ್ದಾರೆ. ರಾಘವೇಂದ್ರ ರಾಜ್‌ ಕುಮಾರ್‌ ಅವರ ಪತ್ನಿ ಮಂಗಳಾ ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್‌ ಮಾಡಿದರು.

‘ಕನ್ನಡ ದೇಶದೋಳ್’, ‘ಕಲಿವೀರ’ ನಿರ್ದೇಶಕ ಅವಿರಾಮ್‌. ಚಿತ್ರದ ಬಗ್ಗೆ ಮಾತನಾಡಿದ ಅವರು, ‘ಆಪರೇಷನ್ ಯು’ ಶೀರ್ಷಿಕೆ ತುಂಬಾ ವಿಶೇಷವಾಗಿದೆ. ಸೈಕಾಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದ್ದು. ಸಾಮಾನ್ಯ ಮನುಷ್ಯನನ್ನು ತಟ್ಟುವ, ಬಡಿದೆಬ್ಬಿಸುವ, ಎಚ್ಚರಿಕೆ ನೀಡುವ ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ಮಂಜುನಾಥ್ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ. ‘ಕಲಿವೀರ’ ಬಳಿಕ ಇದು ಒಳ್ಳೆ ಪ್ರಾಜೆಕ್ಟ್. ಇದು ಬೇರೆ ತರ ರೀತಿ ಸಿನಿಮಾ. ಚಿತ್ರದಲ್ಲಿ ರಾಘಣ್ಣ ಪಾತ್ರ ವಿಶೇಷವಾಗಿರುತ್ತದೆ’ ಎಂದರು.

ನಿರ್ಮಾಪಕ ಮಂಜುನಾಥ್ ಮಾತನಾಡಿ, ‘ನಾನು ನನ್ನ ಮಗಳಿಗೋಸ್ಕರ ಮಾಡುತ್ತಿರುವ ಸಿನಿಮಾವಿದು. ಶ್ರೀಲಂಕಾ ಹೋದಾಗ ಕೇಳಿದ ಸ್ಟೋರಿ ನಾನು. ಈ ಸ್ಟೋರಿ ಮಾಡಬೇಕು ಅಂತಾ ನನ್ನ ತಲೆಯಲ್ಲಿ ಬಂದಿದ್ದು. ಆ ಬಳಿಕ ನಿರ್ದೇಶಕರ ಜೊತೆ ಚರ್ಚೆ ನಡೆಸಿದ್ದೇವೆ. ನಿರ್ದೇಶಕರು ಈ ಸಿನಿಮಾಗೆ ತುಂಬಾ ಚೆನ್ನಾಗಿ ಜೀವ ತುಂಬಿದ್ದಾರೆ. ಸಿನಿಮಾದ ಕಥೆಗೆ ಬೇಕಾದ ಎಲ್ಲಾ ನಟರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಸಿನಿಮಾನೇ ಹೀರೋ ಆಗಿದೆ’ ಎಂದು ತಿಳಿಸಿದರು.

ಆರ್ಮುಖ ರವಿಶಂಕರ್, ಧರ್ಮ, ಅವಿನಾಶ್, ಮಾಳವಿಕಾಅವಿನಾಶ್, ಸ್ಪರ್ಶ ರೇಖಾ, ಗೋವಿಂದೇ ಗೌಡ ಸೇರಿದಂತೆ ಹಲವು ನಟಿಸುತ್ತಿದ್ದು, ರಾಘವೇಂದ್ರ ವಿ. ಸಂಗೀತ, ಹಾಲೇಶ್ ಎಸ್. ಸಂಕಲನವಿದೆ. ಬೆಂಗಳೂರು ಸುತ್ತಮುತ್ತ ಅಕ್ಟೋಬರ್ ಮೊದಲ ವಾರದಿಂದ ಚಿತ್ರೀಕರಣ ಶುರುವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT