ಪ್ರಸಕ್ತ ಸಾಲಿನ ಆಸ್ಕರ್ ಪ್ರಶಸ್ತಿ ಘೋಷಣೆಯಾಗಿದೆ. ಚೀನಾದಕ್ಲೋಯಿ ಜಾವ್ ನಿರ್ದೇಶನದ ‘ನೋಮಡ್ ಲ್ಯಾಂಡ್’ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಾಚಿಕೊಂಡಿದೆ. ಆಂಥೊನಿ ಹಾಪ್ಕಿನ್ಸ್ ಅವರಿಗೆ ‘ಮಾಂಕ್’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಒಲಿದಿದೆ.
‘ನೋಮಡ್ ಲ್ಯಾಂಡ್’ಗೆ ಅತ್ಯುತ್ತಮ ನಿರ್ದೇಶನ (ಕ್ಲೋಯಿ ಜಾವ್ ಅವರಿಗೆ), ಇದೇ ಚಿತ್ರದ ನಟನೆಗೆ ಫ್ರಾನ್ಸಿಸ್ ಮೆಡಾರ್ಮಂಡ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಉಳಿದವರ ವಿವರ ಇಲ್ಲಿದೆ.
ಅತ್ಯುತ್ತಮ ಪೋಷಕ ನಟ; ಡ್ಯಾನಿಯಲ್ ಕಲೂಯಾ
ಚಿತ್ರ: ಜೂಡಸ್ ಆ್ಯಂಡ್ ಬ್ಲಾಕ್ ಮೆಶಿಯಾ
ಅತ್ಯುತ್ತಮ ಪೋಷಕ ನಟಿ:ಯಾನ್ ಯು ಜಂಗ್
ಚಿತ್ರ: ಮಿನಾರಿ
ಅತ್ಯುತ್ತಮ ಮೂಲ ಸ್ಕ್ರೀನ್ಪ್ಲೇ; ಎಮೆರಲ್ಡ್ ಫೆನಲ್
ಚಿತ್ರ:ಪ್ರಾಮಿಸಿಂಗ್ ಯಂಗ್ ವುಮನ್;
ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ; ಅನದರ್ ರೌಂಡ್
ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್; ಟೆನೆಟ್
ಅತ್ಯುತ್ತಮ ಧ್ವನಿ ವಿನ್ಯಾಸ; ಸೌಂಡ್ ಆಫ್ ಮೆಟಲ್
ಅತ್ಯುತ್ತಮ ಸಂಕಲನ; ಸೌಂಡ್ ಆಫ್ ಮೆಟಲ್
ಅತ್ಯುತ್ತಮ ಕೇಶವಿನ್ಯಾಸ; ಮಾ ರೇನೀಸ್ ಬ್ಲ್ಯಾಕ್ ಬಾಟಮ್
ಅತ್ಯುತ್ತಮ ಮೇಕಪ್; ಮಾ ರೇನೀಸ್ ಬ್ಲ್ಯಾಕ್ ಬಾಟಮ್
ಅತ್ಯುತ್ತಮ ಛಾಯಾಗ್ರಹಣ; ಮಾಂಕ್
ಅತ್ಯುತ್ತಮ ನಿರ್ಮಾಣ ವಿನ್ಯಾಸ; ಮಾಂಕ್ (Mank)
ಈ ಬಾರಿಯ ಆಸ್ಕರ್ ಬಾಚಿಕೊಂಡ ‘ನೋಮಾಡ್ಸ್ ಲ್ಯಾಂಡ್ʼ ಚಿತ್ರವು ಭಾಗಶಃ ಸಾಕ್ಷ್ಯಚಿತ್ರದ ಮಾದರಿಯಲ್ಲಿದೆ. ಅಮೆರಿಕದಲ್ಲಿ ವ್ಯಾನ್‌ನೊಳಗೇ ಬದುಕು ನಡೆಸುವ (ವ್ಯಾನ್ ನಿವಾಸಿಗಳು) ಅವರ ಬದುಕಿನ ಪ್ರಯಾಣವನ್ನು ಈ ಚಿತ್ರ ಕಟ್ಟಿಕೊಟ್ಟಿದೆ.
ಲಾಸ್ ಏಂಜಲೀಸ್‌ನ ದಿ ಡಾಲ್ಬಿ ಥಿಯೇಟರ್ ಮತ್ತು ಡೌನ್‌ಟೌನ್‌ನಲ್ಲಿ ಈ ಸಮಾರಂಭ ನಡೆಯಿತು. ಕೋವಿಡ್ ಕಾರಣಕ್ಕಾಗಿ ಎಲ್ಲ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ ಎರಡು ಸ್ಥಳಗಳಲ್ಲಿ ಪ್ರಶಸ್ತಿ ಪ್ರದಾನ ಆಯೋಜಿಸಲಾಗಿತ್ತು.
ನಾಟಕೀಯ ಕಥೆ ಆಧರಿತ ಮಾಂಕ್ ಚಿತ್ರಕ್ಕೆ 10ಕ್ಕೂ ಹೆಚ್ಚು ನಾಮನಿರ್ದೇಶನ ಸಲ್ಲಿಕೆಯಾಗಿದ್ದವು. ಪ್ರತೀಕಾರದ ಕಥಾವಸ್ತುವುಳ್ಳ ‘ಪ್ರಾಮಿಸಿಂಗ್ ಯಂಗ್ ವುಮನ್’, ಕೊರಿಯದ ವಲಸೆ ಕುಟುಂಬಗಳ ಕಥೆ ‘ಮಿನಾರಿ’, ನಾಗರಿಕ ಹಕ್ಕುಗಳ ಕಥೆ ‘ಜುದಾಸ್ ಆ್ಯಂಡ್ ಬ್ಲ್ಯಾಕ್ ಮೆಸ್ಸಾ’, ಬುದ್ಧಿಮಾಂದ್ಯತೆಯ ವಿಷಯ ಒಳಗೊಂಡ ಕಥೆ ‘ದಿ ಫಾದರ್’, ಮತ್ತು ಕಿವುಡ ಡ್ರಮ್ಮರ್‌ನ ಕಥೆಯಾದ ‘ಸೌಂಡ್ ಆಫ್ ಮೆಟಲ್’. ‘ಬ್ಲ್ಯಾಕ್ ಪ್ಯಾಂಥರ್’ ಚಿತ್ರದ ನಟ ದಿವಂಗತ ಚಾಡ್ವಿಕ್ ಬೋಸ್‌ಮನ್ ಅವರು ತಮ್ಮ ಕೊನೆಯ ಚಿತ್ರ ‘ಮಾ ರೈನೀಸ್ ಬ್ಲ್ಯಾಕ್ ಬಾಟಮ್’ನ ನಟನೆಗಾಗಿ ಆಸ್ಕರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.