ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಕರ್ ಪ್ರಶಸ್ತಿ: ‘ಪಾರಾಸೈಟ್‌’ ಉತ್ತಮ ಚಿತ್ರ, ಬ್ರಾಡ್ ಪಿಟ್ ಉತ್ತಮ ಪೋಷಕ ನಟ

Last Updated 10 ಫೆಬ್ರುವರಿ 2020, 14:11 IST
ಅಕ್ಷರ ಗಾತ್ರ

ಲಾಸ್‌ ಏಂಜಲೀಸ್:92ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದ್ದು, ಬಾಂಗ್ ಜೂನ್ ಹೊ ನಿರ್ದೇಶನದ ‘ಪಾರಾಸೈಟ್‌’ಗೆ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ದಕ್ಷಿಣ ಕೊರಿಯಾದ ಸಿನಿಮಾವೊಂದು ಈ ಪ್ರಶಸ್ತಿಗೆ ಭಾಜನವಾಗಿರುವುದು ಇದೇ ಮೊದಲು.

‘ಒನ್ಸ್ ಅಪಾನ್ ಎ ಟೈಮ್... ಇನ್ ಹಾಲಿವುಡ್’ ಚಿತ್ರದಲ್ಲಿನ ನಟನೆಗಾಗಿ ಬ್ರಾಡ್ ಪಿಟ್‌ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರೆತಿದೆ. ‘ಮ್ಯಾರೇಜ್ ಸ್ಟೋರಿ’ ಚಿತ್ರದಲ್ಲಿನ ನಟೆನಾಗಿ ಲೌರಾ ಡರ್ನ್‌ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಪ್ರಶಸ್ತಿ ವಿಜೇತರು

ವಿಭಾಗ – ವಿಜೇತರು – ಸಿನಿಮಾ

ಅತ್ಯುತ್ತಮ ನಿರ್ದೇಶಕ:ಬಾಂಗ್ ಜೂನ್ ಹೊ –ಪಾರಾಸೈಟ್‌

ಅತ್ಯುತ್ತಮ ನಟ: ಜೊವಾಕ್ವಿನ್ ಫೀನಿಕ್ಸ್ – ಜೋಕರ್

ಅತ್ಯುತ್ತಮ ನಟಿ: ರೆನೀ ಜೆಲ್ವೆಗರ್ – ಜೂಡಿ

ಅತ್ಯುತ್ತಮ ಪೋಷಕ ನಟ:ಬ್ರಾಡ್ ಪಿಟ್‌ -ಒನ್ಸ್ ಅಪಾನ್ ಎ ಟೈಮ್... ಇನ್ ಹಾಲಿವುಡ್

ಅತ್ಯುತ್ತಮ ಪೋಷಕ ನಟಿ:ಲೌರಾ ಡರ್ನ್‌ -ಮ್ಯಾರೇಜ್ ಸ್ಟೋರಿ

ವಿಭಾಗ – ಸಿನಿಮಾ

ಮ್ಯೂಸಿಕ್ (ಒರಿಜಿನಲ್ ಸಾಂಗ್) – ‘ಲವ್ ಮಿ ಅಗೈನ್’ ಫ್ರಂ ರಾಕೆಟ್‌ ಮ್ಯಾನ್

ಮ್ಯೂಸಿಕ್ (ಒರಿಜಿನಲ್ ಸ್ಕೋರ್) – ಜೋಕರ್

ಅತ್ಯುತ್ತಮ ಚಿತ್ರಕಥೆ –ಪಾರಾಸೈಟ್‌

ಮೇಕಪ್ & ಹೇರ್ ಸ್ಟೈಲ್ – ಬಾಂಬ್‌ಶೆಲ್

ವಿಶುವಲ್ ಎಫೆಕ್ಟ್ಸ್‌ – 1917

ಅತ್ಯುತ್ತಮ ಸಂಕಲನ – ಫೋರ್ಡ್‌ ವಿ ಫೆರಾರಿ

ಸೌಂಡ್ ಮಿಕ್ಸಿಂಗ್ –1917

ಅತ್ಯುತ್ತಮ ಧ್ವನಿ ಸಂಕಲನ –ಫೋರ್ಡ್‌ ವಿ ಫೆರಾರಿ

ಆ್ಯನಿಮೇಟೆಡ್ ಕಿರುಚಿತ್ರ – ಹೇರ್ ಲವ್

ಆ್ಯನಿಮೇಟೆಡ್ ಫೀಚರ್ ಫಿಲಂ – ಟಾಯ್ ಸ್ಟೋರಿ 4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT