ಈ ವಾರ ವಿವಿಧ ಒಟಿಟಿ ವೇದಿಕೆಗಳಲ್ಲಿ ಹಲವು ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಪ್ರಣಯ, ಆ್ಯಕ್ಷನ್, ಹಾಸ್ಯ, ಹಾರರ್ ಸೇರಿದಂತೆ ಹಲವು ಬಗೆಯ ಸಿನಿಮಾಗಳು ಅಕ್ಟೋಬರ್ 4ರಿಂದ ನವೆಂಬರ್ 9ರ ಅವಧಿಯಲ್ಲಿ ಒಟಿಟಿಯಲ್ಲಿ ತೆರೆ ಕಾಣಲಿವೆ.

ಬ್ಯಾಡ್ಗರ್ಲ್ (BadGirl)

ಸೆಪ್ಟೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ‘ಬ್ಯಾಡ್ಗರ್ಲ್’ ಸಿನಿಮಾವು ಇದೀಗ ಒಟಿಟಿ ವೇದಿಕೆಗೆ ಎಂಟ್ರಿ ಕೊಟ್ಟಿದೆ. ಅಂಜಲಿ ಶಿವರಾಮನ್ ನಟಿಸಿರುವ ಮತ್ತು ವರ್ಷ ಭರತ್ ನಿರ್ದೇಶಿಸಿರುವ ಈ ಚಿತ್ರ ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿಯೂ ಬಿಡುಗಡೆಯಾಗಿದೆ.

ಎಲ್ಲಿ ನೋಡಬಹುದು: ಜಿಯೋ ಹಾಟ್ಸ್ಟಾರ್

ಭಾಷೆ: ಕನ್ನಡ ಮತ್ತು ಇತರೆ

ಬಿಡುಗಡೆ: ನವೆಂಬರ್. 4

ಕಿಸ್ (Kiss)

ಕವಿನ್ ಮತ್ತು ಪ್ರೀತಿ ಅಸ್ರಾನಿ ನಟಿಸಿದ ಕಿಸ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸೆ.19ರಂದು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡ ನಂತರ ಕಿಸ್ ಸಿನಿಮಾ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದೆ.

ಎಲ್ಲಿ ನೋಡಬಹುದು: ಜೀ 5

ಭಾಷೆ: ತಮಿಳು

ಬಿಡುಗಡೆ: ನ.7

ಮಹಾರಾಣಿ (Maharani)

'ಮಹಾರಾಣಿ'ಯ ನಾಲ್ಕನೇ ಸೀಸನ್ನಲ್ಲಿ ಹುಮಾ ಖುರೇಷಿ ರಾಣಿ ಭಾರತಿ ಪಾತ್ರದಲ್ಲಿ ಮರಳಲಿದ್ದಾರೆ. ಈ ಸೀಸನ್ನಲ್ಲಿ ರಾಜಕೀಯ ಕಥಾವಸ್ತುವು ರಾಷ್ಟ್ರೀಯ ವೇದಿಕೆಗೆ ವಿಸ್ತರಿಸುತ್ತದೆ. ಶ್ವೇತಾ ಬಸು ಪ್ರಸಾದ್, ವಿಪಿನ್ ಶರ್ಮಾ ಮತ್ತು ಕಾನಿ ಕುಶ್ರುತಿ ಅವರನ್ನು ಒಳಗೊಂಡ ಈ ಅಧ್ಯಾಯವು, ಅಧಿಕಾರದ ಅನ್ವೇಷಣೆಯಲ್ಲಿ ರಾಣಿ ಹೊಸ ಎದುರಾಳಿಗಳನ್ನು ಎದುರಿಸುತ್ತಿರುವಾಗ ಏನೆಲ್ಲಾ ಆಗಲಿದೆ ಎಂದು ಈ ಸೀಸನ್ನಲ್ಲಿ ಕಾಣಬಹುದು.

ಎಲ್ಲಿ ನೋಡಬಹುದು: ಸೋನಿಲಿವ್ (SonyLIV)

ಭಾಷೆ: ಹಿಂದಿ

ಬಿಡುಗಡೆ: ನವೆಂಬರ್ 7

ಬಾರಾಮುಲ್ಲಾ (Baramulla)

ಮಾನವ್ ಕೌಲ್ ನಟನೆಯ 'ಬಾರಾಮುಲ್ಲಾ' ಚಿತ್ರವು ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕಾಶ್ಮೀರ ಕಣಿವೆಯಲ್ಲಿ ಕಾಡುವ ಸೌಂದರ್ಯ ಮತ್ತು ಪ್ರಕ್ಷುಬ್ಧತೆಯಿಂದ ಸೆಳೆಯುವ ಸನ್ನಿವೇಶದಲ್ಲಿ ನಿಗೂಢತೆ, ಭಾವನೆ ಮತ್ತು ಅಲೌಕಿಕತೆಯನ್ನು ಬೆರೆಸುವ ಕಥಾಹಂದರ 'ಬಾರಾಮುಲ್ಲಾ' ಚಿತ್ರವಾಗಿದೆ. ಆರ್ಟಿಕಲ್ 370 ಚಿತ್ರ ಖ್ಯಾತಿಯ ಆದಿತ್ಯ ಸುಹಾಸ್ ಜಂಬಾಳೆ ಅವರು 'ಬಾರಾಮುಲ್ಲಾ' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಜಿಯೋ ಸ್ಟುಡಿಯೋಸ್ನ ಜ್ಯೋತಿ ದೇಶಪಾಂಡೆ ಅವರು ಬಿ62 ಸ್ಟುಡಿಯೋಸ್ನ ಆದಿತ್ಯ ಧರ್ ಮತ್ತು ಲೋಕೇಶ್ ಧರ್ ಅವರ ಸಹಯೋಗದೊಂದಿಗೆ ಈ ಚಿತ್ರವನ್ನು ನಿರ್ಮಿಸಲಾಗಿದೆ.

ಎಲ್ಲಿ ನೋಡಬಹುದು: ನೆಟ್ಪ್ಲಿಕ್ಸ್

ಭಾಷೆ: ಇಂಗ್ಲಿಷ್

ಬಿಡುಗಡೆ: ನ.7

ತೋಡೆ ದೂರ್ ತೋಡೆ ಪಾಸ್ (Thode Door Thode Pass)

ಅಜಯ್ ಭುಯಾನ್ ನಿರ್ದೇಶನದ 'ತೋಡೆ ದೂರ್ ತೋಡೆ ಪಾಸ್' ಮುಂಬರುವ ಕೌಟುಂಬಿಕ ನಾಟಕ ಸರಣಿಯಾಗಿದ್ದು, ಇದೀಗ ಒಟಿಟಿಗೆ ಲಗ್ಗೆ ಇಡುತ್ತಿದೆ. ಈ ಸಿನಿಮಾದಲ್ಲಿ ಮೋನಾ ಸಿಂಗ್ ಮತ್ತು ಪಂಕಜ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಎಲ್ಲಿ ನೋಡಬಹುದು: ಜೀ 5

ಭಾಷೆ: ಹಿಂದಿ

ಬಿಡುಗಡೆ: ನ. 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.