ಶುಕ್ರವಾರ, ಮೇ 29, 2020
27 °C

ಸಂಕ್ರಾಂತಿಗೆ ಬಂದ ‘ಪೈಲ್ವಾನ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ಸುದೀಪ್‌ ನಟನೆಯ ಬಹುನಿರೀಕ್ಷಿತ ‘ಪೈಲ್ವಾನ್‌’ ಚಿತ್ರದ ಟೀಸರ್‌ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗಿದೆ. ಯುಟ್ಯೂಬ್‌ನಲ್ಲಿ ಟೀಸರ್‌ ಬಿಡುಗಡೆಯಾಗಿದ್ದು, ವೈರಲ್‌ ಆಗಿದೆ.

‘ಕೃಷ್ಣ ಮತ್ತು ಕಂಸ ಇಬ್ರು ಪೈಲ್ವಾನರೇ. ಕಂಸ ಅಧರ್ಮಕ್ಕೆ ಕುಸ್ತಿ ಪಡೆದ್ರೆ; ಕೃಷ್ಣ ಧರ್ಮಕ್ಕೆ’ ಎಂಬ ಹಿನ್ನೆಲೆ ಧ್ವನಿಯೊಂದಿಗೆ ಸುದೀಪ್‌ ಕುಸ್ತಿ ಅಖಾಡ ಪ್ರವೇಶಿಸುತ್ತಾರೆ. ಭರ್ಜರಿಯಾಗಿ ಎದುರಾಳಿಯನ್ನು ಚಿತ್ ಮಾಡುತ್ತಾರೆ. 

ಸುದೀಪ್‌ ಮತ್ತು ‘ಹೆಬ್ಬುಲಿ’ ಚಿತ್ರದ ಖ್ಯಾತಿಯ ಕೃಷ್ಣ ಅವರ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ದೊಡ್ಡ ಬಜೆಟ್‌ನ ಚಿತ್ರ ಇದು. ಈ ಸಿನಿಮಾಕ್ಕಾಗಿ ಸುದೀಪ್ 13 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾರೆ.

ಈಗಾಗಲೇ, ನಟ ಯಶ್ ನಟನೆಯ ‘ಕೆಜಿಎಫ್’ ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆ ಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ‘ಪೈಲ್ವಾನ್’ ಸಿನಿಮಾವನ್ನು ಎಂಟು ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ. 

ಕುಸ್ತಿ ಆಧಾರಿತ ಚಿತ್ರ ಇದು. ಹಾಲಿವುಡ್‌ನ ಸಾಹಸ ನಿರ್ದೇಶಕ ಲಾರ್ನೆಲ್‌ ಸ್ಟೋವಲ್ ಅವರ ಸಾಹಸ ನಿರ್ದೇಶನವಿದೆ. ಹಿಂದಿ ಭಾಷೆಯ ಕಿರುತೆರೆ ನಟಿ ಆಕಾಂಕ್ಷಾ ಸಿಂಗ್ ಈ ಚಿತ್ರದ ನಾಯಕಿ. ಬಾಲಿವುಡ್‌ ನಟ ಸುನೀಲ್ ಶೆಟ್ಟಿ ಕೂಡ ಸಿನಿಮಾದಲ್ಲಿದ್ದಾರೆ. 

‘ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಪೈಲ್ವಾನ್‌ನಲ್ಲಿ ನನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚಿದ್ದೇನೆ. ನಿಮ್ಮ ಬೆಂಬಲ ಇರಲಿ’ ಎಂದು ನಟ ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

ವಿಡಿಯೊ ಲಿಂಕ್‌: https://www.youtube.com/watch?v=POMumo3pS80&feature=youtu.be

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು