ಕಾಕ್ರೋಚ್ ಸುಧಿ ಎಂದೇ ಖ್ಯಾತಿ ಪಡೆದಿರುವ ಸುಧೀರ್ ಬಾಲರಾಜ್ ದಂಪತಿ ನಟ ದುನಿಯಾ ವಿಜಯ್ ಅವರನ್ನು ಭೇಟಿಯಾಗಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ADVERTISEMENT
ಕಳೆದ ವಾರ ಬಿಗ್‌ಬಾಸ್ ಸೀಸನ್ 12ರಿಂದ ಎಲಿಮಿನೇಟ್ ಆಗಿ ಆಚೆ ಬಂದಿದ್ದ ಕಾಕ್ರೋಚ್ ಸುಧಿ ಈಗ ‘ಸಿಟಿ ಲೈಟ್ಸ್’ ಸಿನಿಮಾದ ಚಿತ್ರೀಕರಣ ಸೆಟ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ನಟ ಸುಧೀರ್ ಬಾಲರಾಜ್ ಅವರು ಕನ್ನಡದ ಹಲವು ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ಖಡಕ್ ಡೈಲಾಗ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ಅಷ್ಟೇ ಅಲ್ಲದೇ ದುನಿಯಾ ವಿಜಯ್ ಅವರ ಜೊತೆಗೆ ಸಲಗ, ಭೀಮ ಸಿನಿಮಾದಲ್ಲಿ ನಟ ಕಾಕ್ರೋಚ್ ಸುಧಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ಈಗ ನಟ ಕಾಕ್ರೋಚ್ ಸುಧಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಟ ದುನಿಯಾ ವಿಜಯ್, ವಿನಯ್ ರಾಜ್‌ಕುಮಾರ್ ಹಾಗೂ ದುನಿಯಾ ವಿಜಯ್ ಪುತ್ರಿ ಜೊತೆಗೆ ಸುಧಿ ದಂಪತಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ಪೋಸ್ಟ್ ಜೊತೆಗೆ ‘ಸಿಟಿ ಲೈಟ್ಸ್ ಚಿತ್ರೀಕರಣದ ಸಮಯದಲ್ಲಿ ವಿಜಿ ಅಣ್ಣ ಹಾಗೂ ವಿನಯ್ ರಾಜಕುಮಾರ್ ಅವರ ಜೊತೆ ಕಳೆದ ಕ್ಷಣ’ ಎಂದು ಸುಧೀರ್ ಬಾಲರಾಜ್ ಬರೆದುಕೊಂಡಿದ್ದಾರೆ.