ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಮಾನ್ ಖಾನ್ ಜೊತೆಗಿನ ಡೇಟಿಂಗ್ ವದಂತಿ ಬಗ್ಗೆ ಮೌನ ಮುರಿದ ಪೂಜಾ ಹೆಗ್ಡೆ

Last Updated 14 ಏಪ್ರಿಲ್ 2023, 6:08 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ಡೇಟಿಂಗ್ ವದಂತಿ ಕುರಿತಂತೆ ನಟಿ ಪೂಜಾ ಹೆಗ್ಡೆ ಮೌನ ಮುರಿದಿದ್ದಾರೆ.

ಬಿಡುಗಡೆಗೆ ಸಿದ್ಧವಾಗಿರುವ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಪೂಜಾ ಹೆಗ್ಡೆ ನಟಿಸಿದ್ದಾರೆ. ಡೇಟಿಂಗ್ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಈಗ ಸಿನಿಮಾ ವೃತ್ತಿಜೀವನ ನನ್ನ ಆದ್ಯತೆ ಎಂದು ಹೇಳಿದ್ದಾರೆ.

ಕೆಲ ತಿಂಗಳುಗಳಿಂದ ಸಲ್ಮಾನ್ ಖಾನ್- ಪೂಜಾ ಹೆಗ್ಡೆ ಡೇಟಿಂಗ್ ಕುರಿತಂತೆ ವದಂತಿಗಳು ಹಬ್ಬುತ್ತಿದ್ದು, ಇಬ್ಬರೂ ಸಹ ಇದನ್ನು ಒಪ್ಪಿಕೊಂಡಿಲ್ಲ ಹಾಗೂ ನಿರಾಕರಿಸಿಯೂ ಇಲ್ಲ.

ಮಂಗಳೂರಿನಲ್ಲಿ ನಡೆದ ಪೂಜಾ ಹೆಗ್ಡೆ ಸಹೋದರನ ವಿವಾಹ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಭಾಗವಹಿಸಿದ್ದ ಬಳಿಕ ವದಂತಿ ಮತ್ತಷ್ಟು ಜೋರಾಗಿತ್ತು. ಮದುವೆ ಕಾರ್ಯಕ್ರಮದ ಹಲವು ಚಿತ್ರಗಳು ಆನ್‌ಲೈನ್‌ನಲ್ಲಿ ಹರಿದಾಡಿದ್ದವು.

‘ಇ ಟೈಮ್ಸ್’ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಜೊತೆಗಿನ ಸಂಬಂಧದ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು,‘ನಾನು ಇದರ ಬಗ್ಗೆ ಏನು ಹೇಳಲಿ. ನನ್ನ ಕುರಿತಾದ ವದಂತಿಗಳ ಬಗ್ಗೆ ಬಹಳ ಓದುತ್ತಿದ್ದೇನೆ. ನಾನು ಸದ್ಯ ಸಿಂಗಲ್. ಈಗ ಕೇವಲ ನನ್ನ ವೃತ್ತಿಜೀವನದ ಬಗ್ಗೆ ಅಷ್ಟೇ ದೃಷ್ಟಿ ನೆಟ್ಟಿದ್ದೇನೆ. ಈ ವದಂತಿಗಳ ಬಗ್ಗೆ ವಿವರಣೆ ನೀಡಲು ನನಗೆ ಸಮಯವಿಲ್ಲ’ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗಷ್ಟೆ ಬಿಡುಗಡೆಯಾದ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ಚಿತ್ರದ ಟ್ರೇಲರ್ ಬಾರಿ ಟ್ರೋಲ್‌ಗೆ ಒಳಗಾಗಿತ್ತು.

ಫರ್ಹಾದ್ ಸಾಮ್ಜಿ ನಿರ್ದೆಶನದ ಚಿತ್ರದಲ್ಲಿ ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಶೆಹನಾಜ್ ಗಿಲ್, ಪಲಕ್ ತಿವಾರಿ, ಭೂಮಿಕಾ ಚಾವ್ಲಾ ಮುಂತಾದವರು ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT