ಶನಿವಾರ, ಸೆಪ್ಟೆಂಬರ್ 18, 2021
22 °C

‘ದ್ವಿತ್ವ’ ಸಿನಿಮಾದಲ್ಲಿ ಪುನೀತ್‌-ತ್ರಿಶಾ; ಮತ್ತೆ ಒಂದಾದ ‘ಪವರ್‌’ ಜೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಪವರ್‌’ ಸಿನಿಮಾದಲ್ಲಿ ಸಿನಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಪುನೀತ್‌ ರಾಜ್‌ಕುಮಾರ್‌ ಹಾಗೂ ತ್ರಿಶಾ ಕೃಷ್ಣನ್‌ ಜೋಡಿ ಇದೀಗ ಮತ್ತೆ ತೆರೆ ಮೇಲೆ ಒಂದಾಗಲಿದೆ. ನಿರ್ದೇಶಕ ಪವನ್‌ ಕುಮಾರ್‌ ಅವರು ಆ್ಯಕ್ಷನ್‌ ಕಟ್‌ ಹೇಳಲಿರುವ, ಪುನೀತ್ ನಾಯಕರಾಗಿ ನಟಿಸಲಿರುವ ‘ದ್ವಿತ್ವ’ದ ನಾಯಕಿಯಾಗಿ ತ್ರಿಶಾ ಆಯ್ಕೆಯಾಗಿದ್ದಾರೆ. 

ಸೋಮವಾರ ಸಂಜೆ ಹೊಂಬಾಳೆ ಫಿಲ್ಮ್ಸ್‌ ಇದನ್ನು ಟ್ವಿಟರ್‌ನಲ್ಲಿ ಘೋಷಿಸಿದ್ದು, ‘ದ್ವಿತ್ವದ ನಾಯಕಿ ಇಲ್ಲಿದ್ದಾರೆ. ಚಿತ್ರತಂಡಕ್ಕೆ ಪ್ರತಿಭಾನ್ವಿತ ತ್ರಿಶಾಗೆ ಸ್ವಾಗತ’ ಎಂದು ಉಲ್ಲೇಖಿಸಿದೆ. ‘ದ್ವಿತ್ವ’ದ ಪೋಸ್ಟರ್‌ನಲ್ಲೇ ಪುನೀತ್‌ ಅವರ ಪಾತ್ರದ ಬಗ್ಗೆ ಮಾಹಿತಿಯಿತ್ತು. ವಿಭಿನ್ನವಾದ ಪೋಸ್ಟರ್‌ ಮೂಲಕವೇ ತ್ರಿಶಾ ಅವರ ಫಸ್ಟ್‌ಲುಕ್‌ ಬಿಡುಗಡೆ ಮಾಡಲಿದೆ. ಚಿತ್ರವು ಸೈಕಲಾಜಿಕಲ್‌ ಡ್ರಾಮಾ ಥ್ರಿಲ್ಲರ್‌ ಕಥೆ ಹೊಂದಿದೆ.

‘ರಾಜಕುಮಾರ್‌’, ‘ಯುವರತ್ನ’ ಯಶಸ್ಸಿನ ಬಳಿಕ ಪುನೀತ್‌ ಮತ್ತೆ ಹೊಂಬಾಳೆ ಫಿಲ್ಮ್ಸ್‌ ಜೊತೆ ಕೈಜೋಡಿಸಿದ್ದಾರೆ. ವಿಜಯ್‌ ಕಿರಗಂದೂರ್‌ ನಿರ್ಮಾಣದ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು