ಬೆಂಗಳೂರು: ‘ಕಾಸಾಗ್ರ್ಯಾಂಡ್’ ಪ್ರಸ್ತುತಿಯ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ 3ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಚಂದನವನದ ಪ್ರತಿಭೆಗಳನ್ನು ಗುರುತಿಸುವ ಉದ್ದೇಶದೊಂದಿಗೆ ‘ಪ್ರಜಾವಾಣಿ’ಯು ಅಮೃತ ಮಹೋತ್ಸವದ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಆರಂಭಿಸಿತು.

ಕಳೆದ ಎರಡು ಆವೃತ್ತಿಗಳು ಅದ್ದೂರಿಯಾಗಿ ನಡೆದಿದ್ದು ಇದೀಗ ಮೂರನೇ ಆವೃತ್ತಿಗೆ ವೇದಿಕೆ ಸಜ್ಜಾಗಿದೆ. ಈ ಆವೃತ್ತಿಗೆ 2024ರಲ್ಲಿ ಬಿಡುಗಡೆಗೊಂಡ ಸಿನಿಮಾಗಳನ್ನು ರಿಗಣಿಸಲಾಗಿದ್ದು, ನಾಮನಿರ್ದೇಶಿತರಾದವರನ್ನು ತಿಳಿಸುವ ಸಮಯ ಇದಾಗಿದೆ.

200ಕ್ಕೂ ಅಧಿಕ ಸಿನಿಮಾಗಳನ್ನು ವೀಕ್ಷಿಸಿರುವ 21 ಪರಿಣತರು 15 ವಿಭಾಗಗಳಲ್ಲಿ ಪ್ರತಿಭಾವಂತರನ್ನು ಆಯ್ಕೆ ಮಾಡಲು ನಾಮನಿರ್ದೇಶನಗಳನ್ನು ಮಾಡಿದ್ದಾರೆ. ಆಯ್ಕೆ ಪ್ರಕ್ರಿಯೆಯು ಪಾರದರ್ಶಕವಾಗಿದ್ದು, ಪರಿಣತರು ನಾಮನಿರ್ದೇಶನಕ್ಕೆ ಆಯ್ಕೆ ಮಾಡಿದವರ ಹೆಸರುಗಳನ್ನು ಮುಖ್ಯತೀರ್ಪುಗಾರರು ಅನುಮೋದಿಸಿದ್ದಾರೆ.

ನಾಮನಿರ್ದೇಶಿತರಾದವರಲ್ಲಿ ಒಬ್ಬರನ್ನು ಚಿತ್ರರಂಗದ ಸಂಘ–ಸಂಸ್ಥೆಗಳ ಒಂದು ಸಾವಿರಕ್ಕೂ ಅಧಿಕ ಸದಸ್ಯರು ಮತ ಹಾಕುವ ಮುಖಾಂತರ ವಿಜೇತರನ್ನಾಗಿ ಆಯ್ಕೆ ಮಾಡಲಿದ್ದಾರೆ. ಯಾವ ವಿಭಾಗದಲ್ಲಿ ಪ್ರಶಸ್ತಿ ಯಾರ ಮುಡಿಗೇರಲಿದೆ ಎನ್ನುವುದು ‘ಸಿನಿ ಸಮ್ಮಾನ’ ಕಾರ್ಯಕ್ರಮದಲ್ಲೇ ಘೋಷಣೆಯಾಗಲಿದೆ.

ಮೊದಲ ಹಂತವಾಗಿ ಮೂರು ವಿಭಾಗಗಳಲ್ಲಿ ನಾಮನಿರ್ದೇಶಿತರಾದವರ ಹೆಸರು, ಸಿನಿಮಾಗಳನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಇನ್ನಷ್ಟು ವಿಭಾಗಗಳಲ್ಲಿ ನಾಮನಿರ್ದೇಶಿತರಾದವರ ಹೆಸರುಗಳನ್ನು ಹಂತ ಹಂತವಾಗಿ ಪ್ರಕಟಿಸಲಾಗುವುದು.

ಸಹ ಪ್ರಾಯೋಜಕರು: ಟಿಟಿಕೆ ಪ್ರೆಸ್ಟೀಜ್, ಫ್ರೀಡಂ ಹೆಲ್ತಿ ಕುಕ್ಕಿಂಗ್ ಆಯಿಲ್, ಹೋಂಡಾ, ಸದ್ಗುರು ಆಯುರ್ವೇದ, ದಿ ಬೆಂಗಳೂರ್ ಸಿಟಿ ಕೊ–ಆಪರೇಟಿವ್ ಬ್ಯಾಂಕ್, ದಿ ಜನತಾ ಕೊ–ಆಪರೇಟಿವ್ ಬ್ಯಾಂಕ್. ಮೊಬಿಲಿಟಿ ಪಾರ್ಟ್ನರ್: ಮರ್ಸಿಡೀಸ್ ಬೆಂಜ್–ಅಕ್ಷಯ್ ಮೋಟರ್ಸ್. ಬ್ಯಾಂಕಿಂಗ್ ಪಾರ್ಟ್ನರ್: ಕೆನರಾ ಬ್ಯಾಂಕ್.

ಸ್ಟೈಲ್ ಪಾರ್ಟ್ನರ್: ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್. ಟ್ರಾವೆಲ್ ಪಾರ್ಟ್ನರ್: ಟ್ರಾವೆಲ್ಮಾರ್ಟ್. ವಾರ್ಡ್ರೋಬ್ ಪಾರ್ಟ್ನರ್: ನ್ಯುಮೆನ್. ನಾಲೆಜ್ ಪಾರ್ಟ್ನರ್ಸ್: ಇನ್ಸೈಟ್ಸ್ಐಎಎಸ್ ಮತ್ತು ಗೀತಂ ಬೆಂಗಳೂರು. ಇನ್ಶ್ಯೂರೆನ್ಸ್ ಪಾರ್ಟ್ನರ್: ನ್ಯಾಷನಲ್ ಇನ್ಶ್ಯೂರೆನ್ಸ್.
ಟೆಲಿಕಾಸ್ಟ್ ಪಾರ್ಟ್ನರ್: ಜೀ ಕನ್ನಡ. ಆಡಿಟ್ ಪಾರ್ಟ್ನರ್: ಇ ಆ್ಯಂಡ್ ವೈ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.