ಬುಧವಾರ, ಮೇ 18, 2022
27 °C

ವೈವಾಹಿಕ ಜೀವನಕ್ಕೆ ಕಾಲಿಟ್ಟ ರಣಬೀರ್ –ಆಲಿಯಾ: ಶುಭ ಹಾರೈಸಿದ ಪ್ರಿಯಾಂಕಾ ಚೋಪ್ರಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ನ ಕ್ಯೂಟ್ ಜೋಡಿ ಎಂದೇ ಹೆಸರಾಗಿರುವ ಆಲಿಯಾ ಭಟ್‌ ಮತ್ತು ರಣಬೀರ್ ಕಪೂರ್ ಅವರು ಗುರುವಾರ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. 

ನವ ದಂಪತಿಗೆ ಬಾಲಿವುಡ್‌ ನಟ –ನಟಿಯರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ್ದಾರೆ. 

ಆಲಿಯಾ ಭಟ್, ರಣಬೀರ್ ಕಪೂರ್ ಅವರಿಗೆ 'ಜೀವಮಾನದ ಪ್ರೀತಿ ಮತ್ತು ಸಂತೋಷ' ಎಂದು ಪ್ರಿಯಾಂಕಾ ಚೋಪ್ರಾ ಶುಭ ಹಾರೈಸಿದ್ದಾರೆ.

ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌ನಲ್ಲಿ ರಣಬೀರ್ ಮತ್ತು ಆಲಿಯಾ ಫೋಟೊ ಹಂಚಿಕೊಂಡಿರುವ ಪ್ರಿಯಾಂಕಾ, ‘ನಿಮ್ಮಿಬ್ಬರಿಗೂ ಅಭಿನಂದನೆಗಳು... ಸದಾ ಪ್ರೀತಿ, ಸಂತೋಷ ನಿಮ್ಮದಾಗಲಿ’ ಎಂದು ಬರೆದುಕೊಂಡಿದ್ದಾರೆ. 
 
ಬಾಂದ್ರಾದಲ್ಲಿರುವ ರಣಬೀರ್‌ ಅವರ 'ವಾಸ್ತು' ನಿವಾಸದಲ್ಲಿ ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಸಮಾರಂಭ ನೆರವೇರಿದೆ. 

ಸಂಭ್ರಮದಲ್ಲಿ ಫೋಟೊಗಳನ್ನು ಆಲಿಯಾ ಮತ್ತು ರಣಬೀರ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಮದುವೆ ಸಮಾರಂಭದಲ್ಲಿ ಎರಡೂ ಕುಟುಂಬಗಳ ಆಪ್ತರು ಮತ್ತು ಸ್ನೇಹಿತರಷ್ಟೇ ಭಾಗವಹಿಸಿದ್ದರು. 
 
ನೀತು ಕಪೂರ್, ಕರೀನಾ ಕಪೂರ್, ಮಹೇಶ್ ಭಟ್, ಸೋನಿ ರಜ್ದಾನ್, ಕರಿಷ್ಮಾ ಕಪೂರ್, ಕರಣ್ ಜೋಹರ್, ಅಯಾನ್ ಮುಖರ್ಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

2010ರಲ್ಲಿ ‘ಅಂಜಾನ ಅಂಜಾನಿ’ ಹಾಗೂ 2012 ರಲ್ಲಿ ‘ಬರ್ಫಿ’ ಸಿನಿಮಾದಲ್ಲಿ ರಣಬೀರ್‌ಗೆ ನಾಯಕಿಯಾಗಿ ಪ್ರಿಯಾಂಕಾ ನಟಿಸಿದ್ದರು. 

ಓದಿ... ರಣಬೀರ್‌ ತೋಳಿನಲ್ಲಿ ಆಲಿಯಾ; ಮದುವೆ ನಂತರ ಮೊದಲ ಸಲ ಕಾಣಿಸಿಕೊಂಡ ಜೋಡಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು