ಪುನೀತ್ ರಾಜ್ಕುಮಾರ್ ನಟನಾಗಿ ಮಾತ್ರವಲ್ಲ, ಸಾಮಾಜಿಕ ಕಳಕಳಿ ಮತ್ತು ನಿಸ್ವಾರ್ಥ ಸೇವೆಗಳಿಂದ ಇತರರಿಗೆ ಮಾದರಿಯಾದವರು.
— Siddaramaiah (@siddaramaiah) October 29, 2025
ಅಪ್ಪು ಇಂದು ನಮ್ಮ ಜೊತೆ ಇಲ್ಲದಿದ್ದರೂ ಅವರ ಸರಳತೆ, ಸಜ್ಜನಿಕೆ, ಬದುಕಿನ ಬಗೆಗಿನ ಪ್ರೀತಿ ಅವರನ್ನು ಎಲ್ಲರೆದೆಯಲ್ಲಿ ಜೀವಂತವಾಗಿಸಿದೆ.
ಎಂದಿಗೂ ಮಾಸದ ನಗುಮೊಗದ ಅಪ್ಪುವಿಗೆ ಪುಣ್ಯಸ್ಮರಣೆಯ ಪ್ರೀತಿಪೂರ್ವಕ ನಮನಗಳು.… pic.twitter.com/AoKwfQ6LvK
ಅಪ್ಪು ಮನುಷ್ಯತ್ವಕ್ಕೆ ದೊಡ್ಡ ಉದಾಹರಣೆ.
— DK Shivakumar (@DKShivakumar) October 29, 2025
ಅಪ್ಪು ಅವರು ಸಮಾಜದಿಂದ ಪಡೆದು ಸಮಾಜಕ್ಕೆ ಹಲವಾರು ಕಾಣಿಕೆಗಳನ್ನು ಕೊಟ್ಟು ಹೋಗಿದ್ದಾರೆ. ತಮ್ಮ ಗುರುತನ್ನು ಬಿಟ್ಟು ಹೋಗಿದ್ದಾರೆ. ದೇವರು ಕೊಟ್ಟಂತಹ ಅವಕಾಶವನ್ನು ಸದುಪಯೋಗ ಮಾಡಿಕೊಂಡಿದ್ದಾರೆ.
ಅಪ್ಪು ಅಜರಾಮರ.. pic.twitter.com/SzfOSUyMkL
ಸರಳತೆ, ಸಜ್ಜನಿಕೆ ಮತ್ತು ಔದಾರ್ಯದ ಮೇರುಶಿಖರವೇ ಆಗಿದ್ದ ಕನ್ನಡ ಚಿತ್ರರಂಗದ ಶ್ರೇಷ್ಠ ನಟರಾದ ಶ್ರೀ ಪುನೀತ್ ರಾಜಕುಮಾರ್ ಅವರನ್ನು ಅತ್ಯಂತ ಭಾವಪೂರ್ಣವಾಗಿ ಸ್ಮರಿಸುತ್ತೇನೆ.
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) October 29, 2025
ತಮ್ಮ ಇಡೀ ಬದುಕನ್ನು ಕಲೆ ಮತ್ತು ಸಮಾಜಸೇವೆಗೆ ಮೀಸಲಿಟ್ಟು, ನಮ್ಮೆಲ್ಲರ ಪಾಲಿಗೆ ಅಕ್ಕರೆಯ ಅಪ್ಪು, ಪವರ್ ಸ್ಟಾರ್ ಆಗಿದ್ದ ಪುನೀತ್ ಅವರು ಕನ್ನಡಿಗರು ಮರೆಯಲಾಗದ… pic.twitter.com/XOHMpMOR7M
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ "ಕರ್ನಾಟಕ ರತ್ನ", ನಮ್ಮೆಲ್ಲರ ಪ್ರೀತಿಯ "ಅಪ್ಪು" ದಿ. ಡಾ. ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯ ದಿನದಂದು ಗೌರವ ನಮನಗಳು.#PuneetRajkumar #Appu pic.twitter.com/XrTkmrOtYa
— Basavaraj S Bommai (@BSBommai) October 29, 2025
ಕನ್ನಡಿಗರೆಲ್ಲರ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆಸಿರುವ ಕರ್ನಾಟಕ ರತ್ನ, ಪವರ್ ಸ್ಟಾರ್ ಶ್ರೀ ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯ ಸಂಸ್ಮರಣೆಗಳು.#PuneethRajkumar
— B.S.Yediyurappa (@BSYBJP) October 29, 2025
ಅಭಿಮಾನಿಗಳ ಹೃದಯದಲ್ಲಿ ಸದಾ ನೆಲೆಸಿರುವ ಅನರ್ಘ್ಯ ರತ್ನ , ಅಭಿಮಾನಿ ದೇವರುಗಳ ಪಾಲಿನ ಮೆಚ್ಚಿನ ಅಪ್ಪು, ಶ್ರೀ ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು. ದೈಹಿಕವಾಗಿ ಮಾತ್ರ ನಮ್ಮಿಂದ ದೂರವಾಗಿರುವ ಕರ್ನಾಟಕ ರತ್ನ ಪವರ್ ಸ್ಟಾರ್ ಅವರ ನೆನಪು ಕನ್ನಡ ನಾಡಿನ ಕೋಟ್ಯಂತರ ಹೃದಯಗಳಲ್ಲಿ ಸದಾ ಹಸಿರು.#PuneethRajkumar pic.twitter.com/OCbhE3C57x
— Vijayendra Yediyurappa (@BYVijayendra) October 29, 2025
ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು, ಪ್ರತಿಯೊಬ್ಬರ ಮನೆ ಮಗನಾಗಿ ಜನ ಮನ್ನಣೆ ಗಳಿಸಿದ್ದ ಅಪ್ಪು ನಮ್ಮನ್ನೆಲ್ಲ ಅಗಲಿ ಇಂದಿಗೆ 4 ವರ್ಷ, ಕರ್ನಾಟಕ ರತ್ನ ಅಪ್ಪು ಅವರ ಪುಣ್ಯಸ್ಮರಣೆಯಂದು ಅವರ ಕಲಾ ಸೇವೆ ಹಾಗೂ ಜನಸೇವೆಯನ್ನು ಸ್ಮರಿಸೋಣ.#PuneethRajkumar pic.twitter.com/Ouk435GU26
— R. Ashoka (@RAshokaBJP) October 29, 2025
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.