ಗುರುವಾರ , ಮೇ 26, 2022
23 °C

ಗೆಳತಿಯರಿಂದ ರಾಧಿಕಾಗೆ ಸೀಮಂತ; ಫುಲ್ ಖುಷ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎರಡನೇ ಮಗುವಿನ ಸಂತಸದಲ್ಲಿರುವ ನಟಿ ರಾಧಿಕಾ ಪಂಡಿತ್ ಅವರ ಸೀಮಂತವನ್ನು ಸ್ನೇಹಿತೆಯರು ಅವರಿಗೆ ಗೊತ್ತಿಲ್ಲದಂತೆ ಏರ್ಪಡಿಸಿದ್ದನ್ನು ಕಂಡು ಆಶ್ಚರ್ಯಗೊಂಡಿರುವ ರಾಧಿಕಾ ಫುಲ್ ಖುಷಿಯಲ್ಲಿದ್ದಾರೆ. 

ಈ ಸಂತಸದ ಕ್ಷಣಗಳ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಅವರು, ಸ್ನೇಹಿತೆಯರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. 

ಹಳದಿ ಬಣ್ಣದ ಗೌನ್ ತೊಟ್ಟು, ದುಂಡನೆಯ ಹೂವಿನ ಕಿರೀಟ ಧರಿಸಿ ಮಗುವನ್ನು ನೋಡುತ್ತಿರುವ ಫೋಟೊ ಕಂಡು ಅಭಿಮಾನಿಗಳು ಫಿದಾ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ನನ್ನ ಹುಡುಗಿಯರ ಗ್ಯಾಂಗ್ ನನ್ನ ಸೀಮಂತವನ್ನು ಏರ್ಪಡಿಸಿದ್ದು ಆಶ್ಷರ್ಯ ತಂದಿತ್ತು. ಜೇನಿನ ಥೀಮ್‌ ಇರಿಸಿಕೊಂಡು ಮಾಡಿದ್ದ ಸೀಮಂತ ಅದ್ಭುತವಾಗಿತ್ತು. ಈ ಜೇನಿಗೆ ಜೇನಿನ ಥೀಮ್ ಇಟ್ಟುಕೊಂಡು ಸೀಮಂತ ಮಾಡಿದ ಆಂಟಿಯರಿಗೆ ಧನ್ಯವಾದಗಳು. ಇದೊಂದು ಸುಂದರವಾದ ಸೀಮಂತ. ಲವ್ ಯೂ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು, ಈ ಸಂಭ್ರಮದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು