ಬೆಂಗಳೂರು: ತಾರಾ ದಂಪತಿ ಯಶ್–ರಾಧಿಕಾ ಅವರ ಮಗಳು ಹೇಗಿರಬಹುದೆಂದು ನೋಡಬೇಕೇ? ಅಭಿಮಾನಿಗಳ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.
ಯಶ್ –ರಾಧಿಕಾ ಪಂಡಿತ್ ದಂಪತಿತಮ್ಮ ಅಧಿಕೃತ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಮಗಳ ಫೋಟೊವನ್ನು ಪ್ರಕಟಿಸಿದ್ದಾರೆ.
ಕತ್ತೆತ್ತಿ ನೋಡುತ್ತಿರುವ ಈ ಪುಟಾಣಿಯ ಫೋಟೊ ಜತೆಗೆ ‘ಇವಳು ಬರೋವರೆಗಷ್ಟೇ ನನ್ನ ಹವಾ. ಇವಳು ಬಂದ ಮೇಲೆ ಇವಳದ್ದೇ ಹವಾ!’ ಎಂದು ತಮ್ಮ ಸಿನಿಮಾ ಡೈಲಾಗ್‌ನ ಅಡಿಟಿಪ್ಪಣಿಯನ್ನೂ ಹಾಕಿದ್ದಾರೆ.
‘ನೀವು ಹೇಳಿದ್ದೇ ಸರಿ....
ಇವಳು ಬರೋವರ್ಗು ಮಾತ್ರ ನನ್ನ ಹವಾ.. ಇವಳು ಬಂದಾಗಲಿಂದ ಬರೀಇವಳದ್ದೇ ಹವಾ❤❤❤❤❤.. ಇನ್ನೂ ಹೆಸರಿಟ್ಟಿಲ್ಲ ಸದ್ಯಕ್ಕೆ Baby YR ಅಂತಾನೇ ಕರೆಯೋಣ❤❤❤❤❤.. ಎಂದಿನಂತೆ ನಿಮ್ಮ ಆಶೀರ್ವಾದ ಇವಳ ಮೇಲೂ ಇರಲಿ...’ ಎಂದು ಅವರು ಬರೆದುಕೊಂಡಿದ್ದಾರೆ.
‘Baby YR' ಮುದ್ದಾದ ಚಿತ್ರ ಇಲ್ಲಿದೆ ನೋಡಿ..
ಅಕ್ಷಯ ತೃತೀಯ (ಮೇ.7) ದಿನದಂದು ತಮ್ಮ ಕೂಸನ್ನು ತೋರಿಸುವುದಾಗಿ ರಾಧಿಕಾ ಪಂಡಿತ್ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು.
ತಂದೆ–ಮಗಳ ಸಂಬಂಧ ಬೆಲೆ ಕಟ್ಟಲಾಗದ್ದು. ನಮ್ಮ ಮುದ್ದು ಮಗಳನ್ನು ನೋಡಲು ನೀವೆಲ್ಲಾ ಕಾತರರಾಗಿದ್ದೀರಿ. ನಾವು ನಿಮಗೆ ನಿರಾಸೆ ಮೂಡಿಸುವುದಿಲ್ಲ. ಇದೇ ಮೇ.7 ಅಕ್ಷಯ ತೃತೀಯ ದಿನದಂದು ನಮ್ಮ ಅತ್ಯಮೂಲ್ಯವಾದ, ಪ್ರಶಸ್ತ ಆಸ್ತಿಯನ್ನು ಬಹಿರಂಗಪಡಿಸಲಿದ್ದೇವೆ ಎಂದು ಮಲಗಿರುವ ಮಗಳನ್ನೇ ದಿಟ್ಟಿಸುತ್ತಿರುವ ಯಶ್ ಫೋಟೊವನ್ನು ಅಪ್‌ಲೋಡ್ ಮಾಡಿದ್ದಾರೆ.
ಇವನ್ನೂ ಓದಿ...
*ಸಾಮಾಜಿಕ ಮಾಧ್ಯಮಗಳಲ್ಲಿ ನಟ ಯಶ್ ಮಗಳ ಫೋಟೊ ವೈರಲ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.