ಮಂಗಳವಾರ, ನವೆಂಬರ್ 30, 2021
21 °C

ಡಿಸೆಂಬರ್ ಅಂತ್ಯದಿಂದ ಶೂಟಿಂಗ್ ಆರಂಭಿಸಲಿರುವ ಸೂಪರ್‌ಸ್ಟಾರ್ ರಜನಿಕಾಂತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಪರ್‌ ಸ್ಟಾರ್ ರಜನಿಕಾಂತ್‌ ಕಳೆದ ಕೆಲ ವರ್ಷಗಳಿಂದ ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಯಾವ ಕಾರಣಕ್ಕೂ ಅವರು ಸಿನಿಮಾ ಶೂಟಿಂಗ್‌ಗೆ ಬ್ರೇಕ್ ನೀಡಿರಲಿಲ್ಲ. ಆದರೆ ಕೊರೊನಾ ಪರಿಸ್ಥಿತಿಯಲ್ಲಿ ಶೂಟಿಂಗ್‌ಗೆ ವಿರಾಮ ನೀಡುವುದು ಅನಿವಾರ್ಯವಾಗಿತ್ತು. ಆ ಕಾರಣಕ್ಕೆ ರಜನಿ ನಟನೆಯ ಮುಂದಿನ ‘ಅಣ್ಣಾತೆ’ ಸಿನಿಮಾದ ಶೂಟಿಂಗ್‌ ಅನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಎಲ್ಲಾ ಸರಿಯಾಗಿದ್ದರೆ ‘ಅಣ್ಣಾತೆ’ 2021ರ ಸಂಕ್ರಾಂತಿಗೆ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆಯನ್ನು 2021ರ ಬೇಸಿಗೆಗೆ ಮುಂದಕ್ಕೆ ಹಾಕಲಾಗಿದೆ.

ಅಣ್ಣಾತೆ ರಜನಿ ನಟನೆಯ 168ನೇ ಸಿನಿಮಾ. ಸಿರುತೈ ಶಿವ ಈ ಸಿನಿಮಾಗೆ ಆಕ್ಷ್ಯನ್‌ ಕಟ್ ಹೇಳಲಿದ್ದಾರೆ. ಸದ್ಯದ ಸುದ್ದಿಯ ಪ್ರಕಾರ ಈ ಸಿನಿಮಾದ ಶೂಟಿಂಗ್ ರಜನಿ ಹುಟ್ಟುಹಬ್ಬದ ನಂತರ ಆರಂಭವಾಗಲಿದೆಯಂತೆ. ಅಂದರೆ ಡಿಸೆಂಬರ್ 2ನೇ ವಾರದ ನಂತರ ಶೂಟಿಂಗ್ ಸೆಟ್‌ಗೆ ಮರಳಲಿದೆ ಚಿತ್ರತಂಡ. 

ಅದರೊಂದಿಗೆ ಕೈತಿ ಖ್ಯಾತಿ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾದಲ್ಲೂ ರಜನಿ ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾದ ಶೂಟಿಂಗ್‌ ಕೂಡ ನಡೆಯಬೇಕಿದೆ. 

ಅಷ್ಟೇ ಅಲ್ಲದೇ ನಟ–ನಿರ್ದೇಶಕ ರಾಘವ ಲಾರೆನ್ಸ್ ಕೂಡ ರಜನಿಗಾಗಿ ಕಥೆಯೊಂದನ್ನು ಸಿದ್ಧಪಡಿಸಿಟ್ಟುಕೊಂಡಿದ್ದು ಅದರ ಕೆಲಸಗಳು ಕೂಡ ಕೊರೊನಾ ಕಾರಣದಿಂದ ಮುಂದಕ್ಕೆ ಹೋಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು