ರಜನಿಕಾಂತ್ ನಟನೆಯ ‘ಅಣ್ಣಾತೆ’ ಸಿನಿಮಾದ ಶೂಟಿಂಗ್ ಈಗಾಗಲೇ ಅರ್ಧದಷ್ಟು ಪೂರ್ಣಗೊಂಡಿದೆ. ಲಾಕ್ಡೌನ್ಗೂ ಮೊದಲು ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ನಿರ್ಧರಿಸಿತ್ತು. ಇದಕ್ಕಾಗಿ ಅದ್ದೂರಿ ಸೆಟ್ ಅಳವಡಿಕೆಗೂ ನಿರ್ಧರಿಸಿತ್ತು. ಕೋವಿಡ್–19 ಸೋಂಕು ಹೆಚ್ಚಳವಾದ ಪರಿಣಾಮ ಅಲ್ಲಿ ಚಿತ್ರೀಕರಣ ನಡೆಸಲು ಹಿಂದಡಿ ಇಟ್ಟಿದೆ.

ಈಗ ಚೆನ್ನೈನಲ್ಲಿಯೇ ಬೃಹತ್ ಸೆಟ್ ಅಳವಡಿಸಿ ಶೂಟಿಂಗ್ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಹೈದರಾಬಾದ್ನಲ್ಲಿಯೂ ಕೊರೊನಾ ಸೋಂಕು ತಹಬಂದಿಗೆ ಬಂದಿಲ್ಲ. ಈ ನಡುವೆಯೇ ರಜನಿಕಾಂತ್ ಕೊರೊನಾ ನಿಯಂತ್ರಣಕ್ಕೆ ಬಾರದ ಹೊರತು ಶೂಟಿಂಗ್ ನಡೆಸಬಾರದು ಎಂದು ಸೂಚಿಸಿದ್ದು ಉಂಟು. ಮತ್ತೊಂದೆಡೆ ಇಡೀ ಚಿತ್ರತಂಡವನ್ನು ಅಲ್ಲಿಗೆ ಕರೆದೊಯ್ದು ಶೂಟಿಂಗ್ ನಡೆಸಲು ತೊಂದರೆಯಾಗಲಿದೆ. ಹಾಗಾಗಿ, ಈ ತೀರ್ಮಾನಕ್ಕೆ ಬರಲಾಗಿದೆಯಂತೆ.

ತಮಿಳುನಾಡು ಸರ್ಕಾರ ಇನ್ನೂ ಸಿನಿಮಾ ಶೂಟಿಂಗ್ಗೆ ಅನುಮತಿ ನೀಡಿಲ್ಲ. ಅನುಮತಿ ಸಿಕ್ಕಿದ ತಕ್ಷಣ ಸರ್ಕಾರದ ಮಾರ್ಗಸೂಚಿ ಅನ್ವಯ ಚಿತ್ರೀಕರಣ ಆರಂಭಿಸುವ ಇರಾದೆ ಚಿತ್ರತಂಡದ್ದು. ಸಿರುಥೈ ಶಿವ ನಿರ್ದೇಶನದ ಈ ಚಿತ್ರಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಿದೆ. ಡಿ. ಇಮಾನ್ ಸಂಗೀತ ಸಂಯೋಜಿಸಿದ್ದಾರೆ. ರಜನಿಗೆ ನಯನತಾರಾ ಜೋಡಿಯಾಗಿದ್ದಾರೆ. ‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್ ಅವರು ‘ತಲೈವ’ನ ಪುತ್ರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಖುಷ್ಬೂ, ಮೀನಾ, ಪ್ರಕಾಶ್ ರಾಜ್ ಸೂರಿ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.