ಬುಧವಾರ, ಮೇ 25, 2022
24 °C

ರಜನಿಕಾಂತ್‌ಗೆ ಬೇಸರ ತಂದ ಐಶ್ವರ್ಯ–ಧನುಷ್ ವಿಚ್ಛೇದನ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

 Credit: Instagram/aishwaryaa_r_dhanush

ಬೆಂಗಳೂರು: ಸೂಪರ್‌ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯ ಮತ್ತು ನಟ ಧನುಷ್ ಮದುವೆ ವಿಚ್ಛೇದನದಲ್ಲಿ ಅಂತ್ಯಗೊಂಡಿದೆ. ಮದುವೆಯಾಗಿ 18 ವರ್ಷಗಳ ಬಳಿಕ ಈ ಜೋಡಿ ಬೇರೆಯಾಗಿದ್ದಾರೆ.

ಆದರೆ ಈ ವಿಚಾರ ಐಶ್ವರ್ಯ ಅವರ ತಂದೆ, ಚಿತ್ರರಂಗದಲ್ಲಿ ಸೂಪರ್‌ಸ್ಟಾರ್ ಎಂದೇ ಗುರುತಿಸಲ್ಪಡುವ ರಜನಿಕಾಂತ್ ಅವರಿಗೆ ತೀವ್ರ ಬೇಸರ ತರಿಸಿದೆ.

ಪುತ್ರಿಯ ವಿಚ್ಛೇದನವನ್ನು ರಜನಿಕಾಂತ್ ಅವರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಅವರು ಚಿಂತೆಗೊಳಗಾಗಿದ್ದಾರೆ ಎಂದು ವಿಯೊನ್ ವರದಿ ಮಾಡಿದೆ.

ಅಲ್ಲದೆ, ಇದು ತಾತ್ಕಾಲಿಕವಾಗಿದ್ದು, ಇಬ್ಬರೂ ಮತ್ತೆ ಒಂದಾಗಲಿ ಎಂದು ರಜನಿಕಾಂತ್ ಬಯಸಿದ್ದಾರೆ. ಅದಕ್ಕಾಗಿ ಎರಡೂ ಕುಟುಂಬಗಳು, ಐಶ್ವರ್ಯ–ಧನುಷ್ ದಂಪತಿ ಮತ್ತೆ ಒಂದಾಗುವಂತೆ ಮಾಡಲು ಪ್ರಯತ್ನ ಮುಂದುವರಿಸಿದ್ದಾರೆ ಎಂದು ಮೂಲಗಳನ್ನು ಆಧರಿಸಿ ವಿಯೊನ್ ಹೇಳಿದೆ.

ಜನವರಿ 17ರಂದು ನಟ ಧನುಷ್ ಮತ್ತು ಐಶ್ವರ್ಯ, ತಾವಿಬ್ಬರೂ ಪರಸ್ಪರ ಬೇರೆಬೇರೆಯಾಗುತ್ತಿರುವುದಾಗಿ ಸಾಮಾಜಿಕ ತಾಣದ ಮೂಲಕ ಘೋಷಿಸಿದ್ದರು. 2004 ರಲ್ಲಿ ಈ ಜೋಡಿ ಮದುವೆಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು