ಚಂದ್ರು ಓಬಯ್ಯ ನಿರ್ದೇಶಿಸಿ, ನಟಿಸಿರುವ ‘ರಾಮ ಆಂಡ್ ರಾಮು’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಚಂದ್ರ ಓಬಯ್ಯ ಈ ಹಿಂದೆ ‘ಯೂ ಟರ್ನ್-2’, ’ಕರಿಮಣಿ ಮಾಲೀಕ’ ಚಿತ್ರಗಳನ್ನು ನಿರ್ದೇಶಿಸಿದ್ದರು.

ಪೌರ ಕಾರ್ಮಿಕರು ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳು, ಈ ವಿಷಯದಲ್ಲಿ ನಾಗರಿಕರ ಪಾತ್ರದ ಬಗ್ಗೆ ಈ ಚಿತ್ರದಲ್ಲಿ ಹೇಳಲಾಗಿದೆ. ‘ಈ ಚಿತ್ರವನ್ನು ವರ್ಷದ ಹಿಂದೆ ಆರಂಭಿಸಿದ್ದೆ. ಫೇಸ್ಬುಕ್ನಲ್ಲಿ ನೋಡಿದ ವಿಡಿಯೊವೊಂದು ಈ ಸಿನಿಮಾವಾಗಲು ಪ್ರೇರಣೆ. ನಮ್ಮ ಪರಿಸರ, ರಸ್ತೆಯನ್ನು ಸ್ವಚ್ಚಗೊಳಿಸುವ ಪೌರಕಾರ್ಮಿಕ ಮಹಿಳೆಯೊಬ್ಬಳು ಮನೆಯ ಮುಂದೆ ನಿಂತು ನೀರು ಕೇಳಿದಾಗ, ಆ ಮನೆಯವರು ನಡೆದುಕೊಂಡ ರೀತಿ ಕಂಡು ನನ್ನ ಮನಸಿಗೆ ತುಂಬಾ ನೋವಾಯಿತು. ಅದೇ ಘಟನೆ ಇಟ್ಟುಕೊಂಡು ಕಾದಂಬರಿ ಬರೆದೆ. ನಂತರ ಅದನ್ನೇ ಈ ಸಿನಿಮಾ ಮಾಡಿದ್ದೇನೆ. ನಮ್ಮ ಪರಿಸರವನ್ನು ಸ್ವಚ್ಛ ಮಾಡುವವರನ್ನು ನಾವೇ ಗೌರವಿಸದಿದ್ದರೆ ಹೇಗೆ ಎಂಬ ಸಂದೇಶ ನೀಡುವ ಚಿತ್ರವಿದು’ ಎಂದರು ನಿರ್ದೇಶಕರು.

ಈಗಾಗಲೇ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದ್ದು , ಸೆನ್ಸಾರ್ನಿಂದ ಯು/ಎ ಪ್ರಮಾಣಪತ್ರ ಪಡೆದಿದೆ. ಸೌಮ್ಯ ಚಿತ್ರದ ನಾಯಕಿ. ನಾಗೇಂದ್ರ ಅರಸ್, ಮೂಗು ಸುರೇಶ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.