ಗುರುವಾರ , ಜನವರಿ 27, 2022
20 °C

ನಾನಿ –ಸಾಯಿ ಪಲ್ಲವಿ ಅಭಿನಯದ ‘ಶ್ಯಾಮ್ ಸಿಂಗಾ ರಾಯ್’ ಚಿತ್ರಕ್ಕೆ ರಾಮ್ ಚರಣ್ ಫಿದಾ

ಐಎಎನ್‌ಎಸ್ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಇತ್ತೀಚೆಗೆ ಬಿಡುಗಡೆಯಾದ ನಟ ನಾನಿ -ಸಾಯಿ ಪಲ್ಲವಿ ಅಭಿನಯದ ತೆಲುಗಿನ 'ಶ್ಯಾಮ್ ಸಿಂಗಾ ರಾಯ್' ಸಿನಿಮಾದ ಬಗ್ಗೆ ‘ಆರ್‌ಆರ್‌ಆರ್’ ನಟ ರಾಮ್ ಚರಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಚಾರ ಟ್ವೀಟ್‌ ಮಾಡಿರುವ ಅವರು, ‘ನಮ್ಮ ಚಿತ್ರರಂಗಕ್ಕೆ ಮತ್ತೊಂದು ಅದ್ಭುತ ಚಿತ್ರ #ShyamSinghaRoy ಒಂದು ಸುಂದರ ಅನುಭವ ನೀಡಿದ ನಿರ್ದೇಶಕ ರಾಹುಲ್ ಸಂಕೃತ್ಯನ್, ಚಿತ್ರದಲ್ಲಿ ಅಭಿನಯಿಸಿದ ನಾನಿ ಮತ್ತು ಸಾಯಿ ಪಲ್ಲವಿ ಅವರಿಗೆ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ.

ಚಿತ್ರ ಸಹ ನಟಿಯರಾದ ಕೃತಿ ಶೆಟ್ಟಿ, ಮಡೋನಾ ಸೆಬಾಸ್ಟಿಯನ್ ಹಾಗೂ ಸಂಗೀತ ನಿರ್ದೇಶಕ ಮಿಕ್ಕಿ.ಜೆ.ಮೇಯರ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಚರಣ್ ಅಭಿನಂದನೆ ಸಲ್ಲಿಸಿದ್ದಾರೆ.

'ಶ್ಯಾಮ್ ಸಿಂಗಾ ರಾಯ್' ಚಿತ್ರವನ್ನು ಸಂಕ್ರಾಂತಿ ಹಬ್ಬದ ಬಳಿಕ ಒಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಡಿ.24ರಂದು ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಅಡೆತಡೆಗಳ ನಡುವೆಯೂ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಈವರೆಗೆ ₹43 ಕೋಟಿ ಗಳಿಸಿದೆ.

ಇದನ್ನೂ ಓದಿ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು