ಸೋಮವಾರ, ಮಾರ್ಚ್ 27, 2023
32 °C

ಇವರೇ ನನ್ನ ಮೊದಲ ಲವರ್‌ ಎಂದು ಫೋಟೊ ಹಂಚಿಕೊಂಡ ರಾಮ್‌ ಗೋಪಾಲ್‌ ವರ್ಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಾಲಿವುಡ್‌ನ ವಿವಾದಿತ ನಿರ್ದೇಶಕ ಖ್ಯಾತಿಯ ರಾಮ್‌ ಗೋಪಾಲ್‌ ವರ್ಮಾ ಇತ್ತೀಚೆಗೆ ಫೋಟೊವೊಂದನ್ನು ಹಂಚಿಕೊಂಡಿದ್ದು ಇವರೇ ನನ್ನ ಮೊದಲ ಲವರ್ ಎಂದು ಟ್ವೀಟ್‌ ಮಾಡಿದ್ದಾರೆ.

ವರ್ಮಾ ಹಂಚಿಕೊಂಡಿರುವ ಮಹಿಳೆಯ ಹೆಸರು ಪೋಲವಾರಪು ಸತ್ಯಾ ಎಂದು ಹೇಳಿದ್ದಾರೆ. ನಾನು ಕಾಲೇಜು ದಿನಗಳಲ್ಲಿ ಈಕೆಯನ್ನು ಪ್ರೀತಿ ಮಾಡುತ್ತಿದ್ದೆ ಎಂದು ವರ್ಮಾ ಹೇಳಿದ್ದಾರೆ. ನನ್ನ ಕ್ಷಣ ಕ್ಷಣಂ ಮತ್ತು ರಂಗೀಲಾ ಸಿನಿಮಾಗೆ ಸತ್ಯಾ ಅವರೇ ಸ್ಪೂರ್ತಿ ಎಂದು ಬರೆದುಕೊಂಡಿದ್ದಾರೆ.

ಪ್ರಸ್ತುತ ಸತ್ಯಾ ಅವರು ಅಮೆರಿಕದಲ್ಲಿ ನೆಲೆಸಿದ್ದು ಅವರೇ ಈ ಫೋಟೊಗಳನ್ನು ನನಗೆ ಕಳುಹಿಸಿಕೊಟ್ಟಿದ್ದಾರೆ ಎಂದು ವರ್ಮಾ ಹೇಳಿದ್ದಾರೆ. ನಾನು ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದುವಾಗ ಸತ್ಯಾ ಅವರನ್ನು ಪ್ರೀತಿ ಮಾಡುತ್ತಿದೆ ಎಂದು ವರ್ಮಾ ಹೇಳಿದ್ದಾರೆ. 

90ರ ದಶಕದಲ್ಲಿ ನಿರ್ದೇಶನ ಮಾಡಿದ್ದ ಸತ್ಯಾ ಸಿನಿಮಾಗೆ ನನ್ನ ಲವರ್‌ ಹೆಸರು ಇಡಲಾಗಿತ್ತು ಎಂದು ಹೇಳಿದ್ದಾರೆ.

ಕಳೆದ ವಾರ ವರ್ಮಾ, ನಟಿ ಹಾಗೂ ಮಾಡೆಲ್ ಇನಾಯಾ ಸುಲ್ತಾನ ಜತೆ ಮನಬಂದಂತೆ ನೃತ್ಯ ಮಾಡಿ ಬಳಿಕ ಅವರ ಕಾಲಿಗೆ ಬಿದ್ದು ವಿಚಿತ್ರವಾಗಿ ವರ್ತಿಸಿದ್ದರು. ಈ ವಿಡಿಯೊವನ್ನು ಅವರೇ ಹಂಚಿಕೊಂಡಿದ್ದರು. ಆದರೆ ಆ ವಿಡಿಯೊದಲ್ಲಿ ಇರುವ ವ್ಯಕ್ತಿ ತಾನಲ್ಲ ಎಂದು ವರ್ಮಾ ಹೇಳಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು