‘ರಾಮರಸ’ ಚಿತ್ರದಲ್ಲಿ ‘ಬಿಗ್ಬಾಸ್’ ಹತ್ತನೇ ಆವೃತ್ತಿಯ ವಿಜೇತರಾದ ನಟ ಕಾರ್ತಿಕ್ ಮಹೇಶ್ ನಾಯಕನಾಗಿ ನಟಿಸುತ್ತಿದ್ದು, ಅವರ ಪಾತ್ರವನ್ನು ಪರಿಚಯಿಸುವ ವಿಡಿಯೊ ಬಿಡುಗಡೆಯಾಗಿದೆ.

ಗುರು ದೇಶಪಾಂಡೆ ನಿರ್ಮಿಸುತ್ತಿರುವ, ‘ಜಟ್ಟ’ ಗಿರಿರಾಜ್ ನಿರ್ದೇಶನದ ಈ ಚಿತ್ರದ ಕ್ಯಾರೆಕ್ಟರ್ ಪಂಚ್ ಕಾರ್ತಿಕ್ ಜನ್ಮದಿನದಂದೇ ಬಿಡುಗಡೆಯಾಗಿರುವುದು ವಿಶೇಷ. ಕಾರ್ತಿಕ್ ಮಹೇಶ್ ಅವರ ಜೊತೆಗೆ ‘ಬಿಗ್ಬಾಸ್’ನಲ್ಲಿ ಸ್ಪರ್ಧಿಸಿದ್ದ ಸಹ ಸ್ಪರ್ಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

‘ಜಿ ಅಕಾಡೆಮಿ’ಯಲ್ಲಿ ನಟನೆ ಕಲಿತಿರುವ ಹದಿನೈದು ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸುತ್ತಿದ್ದು, ಇವರ ಜೊತೆಗೆ ನಾಯಕನ ಪಾತ್ರದಲ್ಲಿ ಕಾರ್ತಿಕ್ ಮಹೇಶ್ ಅಭಿನಯಿಸುತ್ತಿದ್ದಾರೆ. ‘ಬಿಗ್ಬಾಸ್’ನಿಂದ ಬಂದ ಬಳಿಕ ಅವರನ್ನು ಭೇಟಿಯಾಗಿ ನಮ್ಮ ಚಿತ್ರದ ಕಥೆ ಹೇಳಿದ್ದೆವು. ಮೊದಲು ಸೀಮಿತ ಬಜೆಟ್ನಲ್ಲಿ ಸಿನಿಮಾ ಮಾಡಬೇಕೆಂದುಕೊಂಡೆವು. ಈಗ ಬಜೆಟ್ ಹೆಚ್ಚಾಗುತ್ತಿದೆ. ನಿರ್ಮಾಣಕ್ಕೆ ನಮ್ಮ ಜೊತೆಗೆ ವಿಕ್ರಮಾದಿತ್ಯ ಜೊತೆಯಾಗಿದ್ದಾರೆ. ಕಾರ್ತಿಕ್ ಅವರಿಗೆ ‘ರಾಜಹುಲಿ’ಯ ಯಶ್ ಅವರ ಛಾಯೆ ಇದೆ’ ಎಂದರು ಗುರು ದೇಶಪಾಂಡೆ.

‘ಪ್ರಸ್ತುತ ಸಂದರ್ಭದಲ್ಲಿ ಸಿನಿಮಾ ನಿರ್ಮಾಣ ಮಾಡಲು ಹೆಚ್ಚಿನ ಧೈರ್ಯ ಬೇಕು. ಆ ಧೈರ್ಯವನ್ನು ಗುರು ದೇಶಪಾಂಡೆ ಮಾಡಿದ್ದಾರೆ. ಕಾರ್ತಿಕ್ ಮಹೇಶ್ ‘ಬಿಗ್ಬಾಸ್’ನಿಂದ ಕನ್ನಡಿಗರ ಮನ ಗೆದ್ದಿದ್ದರು. ಅವರು ಚಿತ್ರದಲ್ಲಿ ಅಭಿನಯಿಸಲು ಶುರು ಮಾಡಿದ ನಂತರ, ನಮ್ಮನ್ನು ಆವರಿಸಿಕೊಳ್ಳಲು ಶುರುವಾದರು. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಇವೆ’ ಎನ್ನುತ್ತಾರೆ ಬಿ.ಎಂ.ಗಿರಿರಾಜ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.