ಭಾನುವಾರ, ಮೇ 16, 2021
22 °C
ರಣಬೀರ್ ರಹಸ್ಯವಾಗಿ ಇನ್‌ಸ್ಟಾಗ್ರಾಂ ಹಿಂಬಾಲಿಸುವಿಕೆ

ಮಾಜಿ ಗೆಳತಿಯರನ್ನು ಫಾಲೋ ಮಾಡ್ತಾರಂತೆ ರಣಬೀರ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೀಪಿಕಾ ಪಡುಕೋಣೆ ಮತ್ತು ಕತ್ರೀನಾ ಕೈಫ್ ಜತೆ ಗೆಳೆತನ ಹೊಂದಿದ್ದ ರಣಬೀರ್ ಕಪೂರ್ ಈಗ ಆಲಿಯಾ ಭಟ್ ಅವರನ್ನು ಪ್ರೀತಿಸುತ್ತಿರುವುದು ಗೊತ್ತಿರುವಂಥದ್ದೆ. ಮಾಧ್ಯಮಗಳ ಜತೆ ಅಷ್ಟಾಗಿ ಮಾತನಾಡದ ರಣಬೀರ್, ಸಾಮಾಜಿಕ ಮಾಧ್ಯಮಗಳಲ್ಲೂ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ, ರಣಬೀರ್ ರಹಸ್ಯವಾಗಿ ಇನ್‌ಸ್ಟಾಗ್ರಾಂನಲ್ಲಿ ಅನೇಕರನ್ನು ಹಿಂಬಾಲಿಸುತ್ತಾರಂತೆ!

ಈ ವಿಷಯವನ್ನು ಸ್ವತಃ ರಣಬೀರ್ ಅವರೇ ಹೇಳಿಕೊಂಡಿದ್ದಾರೆ. ಈ ರೀತಿ ಹಿಂಬಾಲಿಸುವವರ ಪಟ್ಟಿಯಲ್ಲಿ ಮಾಜಿ ಗೆಳತಿಯರಾದ ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್ ಅವರ ಹೆಸರೂ ಇದೆಯಂತೆ. ಅಷ್ಟೇ ಅಲ್ಲ ಹಾಲಿ ಗೆಳತಿ ಆಲಿಯಾ ಭಟ್ ಅವರನ್ನೂ ರಣಬೀರ್ ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡ್ತಾರಂತೆ!  ಮತ್ತೂ ಆಶ್ವರ್ಯದ ಸಂಗತಿ ಎಂದರೆ ರಣಬೀರ್, ದೀಪಿಕಾ ಗಂಡ ರಣವೀರ್ ಸಿಂಗ್ ಅವರನ್ನೂ ತಪ್ಪದೇ ಫಾಲೋ ಮಾಡ್ತಾರಂತೆ. 

ಈ ಹಿಂದೆ ಸಂದರ್ಶವೊಂದರಲ್ಲಿ ಕತ್ರೀನಾ, ರಣಬೀರ್ ರಹಸ್ಯವಾಗಿ ಇನ್‌ಸ್ಟಾಗ್ರಾಂ ಖಾತೆ ಹೊಂದಿರುವುದಾಗಿಯೂ, ಅದನ್ನು ಹೇಗೆ ಬಳಸಬೇಕೆಂಬುದನ್ನೂ ತನಗೆ  ಹೇಳಿಕೊಟ್ಟಿರುವುದಾಗಿ ಹೇಳಿಕೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು