ಮುಂಬೈ: ‘ರಣವೀರ್ ಸಿಂಗ್ ಯಾವಾಗಲೂ ನನ್ನನ್ನು ತಬ್ಬಿಕೊಳ್ಳಲು ಮತ್ತು ಚುಂಬಿಸಲು ಇಷ್ಟಪಡುತ್ತಾರೆ’ ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೇಳಿಕೊಂಡಿದ್ದಾರೆ.

ಶಕುನ್ ಬಾತ್ರಾ ನಿರ್ದೇಶನದ ‘ಗೆಹರಾಯಿಯಾ’ (ಗೆಹ್ರೈಯಾನ್) ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಟಿ ದೀಪಿಕಾ, ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

‘ರಣವೀರ್ ಸಿಂಗ್ ಕುಟುಂಬದವರು ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದಿಲ್ಲ. ಆದರೆ, ಅವರೆಲ್ಲರೂ ಅತ್ಯಂತ ಸೂಕ್ಷ್ಮ ರೀತಿಯಲ್ಲಿ ವರ್ತಿಸುವುದರಿಂದ ಸಂವಹನ ನಡೆಸುವುದು ಕಷ್ಟಕರವಾಗಿರುತ್ತದೆ ಹಾಗೂ ಎರಡು ಕುಟುಂಬಗಳ ನಡುವೆ ಕೆಲವೊಂದು ಭಿನ್ನತೆಗಳು ಇವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಓದಿ... ಹೊಸ ಉಡುಪು ಧರಿಸಿ ಪೋಸ್ ಕೊಟ್ಟ ದೀಪಿಕಾ ಪಡುಕೋಣೆ: ಟ್ರೋಲ್ ಮಾಡಿದ ನೆಟ್ಟಿಗರು

‘ಅಭಿವ್ಯಕ್ತಿಶೀಲ ವ್ಯಕ್ತಿತ್ವ ಹೊಂದಿರುವ ರಣವೀರ್, ಮನಸ್ಸಿನ ಭಾವನೆಗಳನ್ನು ನನ್ನೊಂದಿಗೆ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಅವರಲ್ಲಿ ಸ್ಫೂರ್ತಿ ತುಂಬುವ ವ್ಯಕ್ತಿತ್ವವನ್ನು ಕಂಡಿದ್ದೇನೆ. ಹಾಗಾಗಿ ನಾನು ಧೈರ್ಯಶಾಲಿಯಾಗಿ ಕೆಲವೊಂದು ಆಯ್ಕೆಗಳನ್ನು ಮಾಡಿಕೊಳ್ಳಬಹುದು’ ಎಂದಿದ್ದಾರೆ.

‘ನಾನು, ರಣವೀರ್ ಅವರ ಕೆಲವು ಸಂದರ್ಶನಗಳನ್ನು ಓದಿದ್ದೇನೆ. ನಾನು ಅವರ ಜೀವನದಲ್ಲಿ ಇಲ್ಲದಿದ್ದರೆ, ಅವರ ಜೀವನ ಮತ್ತಷ್ಟು ಭಿನ್ನವಾಗಿರುತ್ತಿತ್ತು. ರಣವೀರ್ ತಮ್ಮ ಯಶಸ್ಸನ್ನು ವಿಭಿನ್ನವಾಗಿ ನಿಭಾಯಿಸುತ್ತಿದ್ದರು ಎಂದು ಜನರಿಗೆ ಹೇಳುತ್ತಾರೆ. ನಾನು ಕೂಡ ಅದನ್ನು ಪ್ರಶಂಸಿಸುತ್ತೇನೆ’ ಎಂದಿದ್ದಾರೆ.

ದೀಪಿಕಾ, 2018ರ ನವೆಂಬರ್‌ನಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಮದುವೆಯಾಗಿದ್ದಾರೆ.

‘ಗೆಹ್ರೈಯಾನ್’ ಸಿನಿಮಾ ಫೆ.11ರಂದು (ಶುಕ್ರವಾರ) ವಿಶ್ವದಾದ್ಯಂತ ತೆರೆಕಾಣಿಲಿದೆ ಎಂದು ಚಿತ್ರತಂಡ ತಿಳಿಸಿದೆ.

ಓದಿ... ನಟಿ ಮೀರಾ ಜಾಸ್ಮಿನ್ ಗ್ಲಾಮರಸ್ ಫೋಟೊಶೂಟ್: ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ವೈರಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.