ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾನ್‌ ಮೀಟ್‌ ಆಯೋಜಿಸುವ ಯೋಚನೆಯಲ್ಲಿ ರಶ್ಮಿಕಾ ಮಂದಣ್ಣ

Last Updated 15 ಸೆಪ್ಟೆಂಬರ್ 2021, 12:22 IST
ಅಕ್ಷರ ಗಾತ್ರ

ನ್ಯಾಷನಲ್‌ ಕ್ರಷ್‌ ಎಂದೇ ಖ್ಯಾತಿ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್‌ ಹಾಗೂ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಹೈದರಾಬಾದ್‌ನಲ್ಲಿ ನಟ ಅಲ್ಲು ಅರ್ಜುನ್‌ ನಟನೆಯ ‘ಪುಷ್ಪ’ ಸಿನಿಮಾದ ಚಿತ್ರೀಕರಣದಲ್ಲಿರುವ ರಶ್ಮಿಕಾ ‘ಫ್ಯಾನ್‌ ಮೀಟ್‌’ ಆಯೋಜಿಸುವ ಯೋಚನೆಯಲ್ಲಿದ್ದಾರೆ.

ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಮಾತನಾಡಿದ ರಶ್ಮಿಕಾ, ‘ನಾನು ಹೈದರಾಬಾದ್‌ನಲ್ಲಿದ್ದೇನೆ. 10–12 ದಿನ ಇಲ್ಲಿಯೇ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೇನೆ. ಲಾಕ್‌ಡೌನ್‌ ಬಳಿಕ ‘ಆಡವಾಳಲು ಮೀಕು ಜೊಹಾರ್ಲು’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದೆ. ‌‘ಮಿಷನ್‌ ಮಜ್ನು’ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ. ಇದಾದ ನಂತರ ‘ಪುಷ್ಪ’ ಚಿತ್ರದ ಚಿತ್ರೀಕರಣದಲ್ಲಿದ್ದೇನೆ. ಇದು ತುಂಬಾ ಕ್ರೇಜಿ ಫಿಲ್ಮ್‌. ‘ಗುಡ್‌ಬೈ’ ಇನ್ನೂ 10 ದಿನದ ಚಿತ್ರೀಕರಣ ಬಾಕಿ ಇದೆ. ಫ್ಯಾನ್‌ ಮೀಟ್‌ ಮಾಡುವ ಆಸೆ ಇದೆ ಆದರೆ ಕೋವಿಡ್‌ ಸ್ಥಿತಿಯಲ್ಲಿ ಈಗ ಆಗುತ್ತಿಲ್ಲ. ಖಂಡಿತವಾಗಿಯೂ ಫ್ಯಾನ್‌ ಮೀಟ್‌ ಮಾಡುತ್ತೇನೆ’ ಎಂದರು.

‘ನನಗೆ ಹಿಂದಿ ಭಾಷೆ ಇಷ್ಟ. ಹಿಂದಿ ಭಾಷೆ ಚಿತ್ರಗಳನ್ನು ಮಾಡುವುದು ನನಗೆ ಇಷ್ಟ. ಇದು ನನಗೆ ಬಹಳ ಸುಲಭವೆನಿಸುತ್ತಿದೆ’ ಎಂದಿರುವ ರಶ್ಮಿಕಾ,‘ಸಿನಿಮಾ ಜೀವನವನ್ನು ಬಹಳ ಇಷ್ಟಪಡುತ್ತಿದ್ದೇನೆ. ನನ್ನ ಕನಸನ್ನು ನಾನು ಜೀವಿಸುತ್ತಿದ್ದೇನೆ.ನನ್ನ ಮುಂದಿನ ಸಿನಿಮಾಗಳು ಬಹಳ ಇಂಟರೆಸ್ಟಿಂಗ್‌ ವಿಷಯಗಳನ್ನು ಹೊಂದಿದೆ. ಮುಂದಿನ ವರ್ಷ ಬಹಳ ಬ್ಯುಸಿಯಾಗಿರಲಿದ್ದೇನೆ. ತಮಿಳಿನಲ್ಲೂ ಚಿತ್ರ ಮಾಡುತ್ತಿದ್ದೇನೆ.ಕನ್ನಡದಲ್ಲೂ ಚಿತ್ರಗಳನ್ನು ಮಾಡುತ್ತೇನೆ. ಊರಿಗೆ ಹೋಗದೆ ಬಹಳ ಸಮಯವಾಯಿತು.ಶೀಘ್ರದಲ್ಲೇ ಕೂರ್ಗ್‌ಗೆ ಹೋಗುತ್ತೇನೆ’ ಎಂದಿದ್ದಾರೆ.

ಸುಮಾರು 1 ಲಕ್ಷಕ್ಕೂ ಅಧಿಕ ಜನರು ಲೈವ್‌ ವೀಕ್ಷಿಸಿದ್ದು, ಲೈವ್‌ ಕೊನೆಯಲ್ಲಿ ಅಭಿಮಾನಿಗಳ ಆಸೆಯಂತೆ ನಾನಾ ಬಗೆಯ ಎಕ್ಸ್‌ಪ್ರೆಷನ್ಸ್‌ಗಳನ್ನು ರಶ್ಮಿಕಾ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT