ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್‌: ಪ್ಯಾಂಟ್‌ ಎಲ್ಲಿ ಎಂದ ನೆಟ್ಟಿಗರು!

ಫಾಲೋ ಮಾಡಿ
Comments

ಪುಷ್ಪ ಸಿನಿಮಾದ ಯಶಸ್ಸಿನ ನಂತರ ನಟಿ ರಶ್ಮಿಕಾ ಮಂದಣ್ಣ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಸಿನಿಮಾದಲ್ಲಿನ ತಮ್ಮ ಪಾತ್ರಕ್ಕಾಗಿ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿರುವ ಅವರು ಟಾಲಿವುಡ್‌ ಸ್ಟಾರ್‌ ಆಗಿದ್ದಾರೆ.

ಸದ್ಯ ರಶ್ಮಿಕಾ ಮಂದಣ್ಣ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ ಆಗಿದ್ದು, ನೆಟ್ಟಿಗರು ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ. ಆದರೆ ಅವರು ಯಾವ ಟ್ರೋಲ್‌ಗಳಿಗೂ ತಲೆಕೆಡಿಸಿಕೊಳ್ಳುವುದಿಲ್ಲ ಹಾಗೇ ಅಂತಹ ಟ್ರೋಲ್‌ಗಳಿಗೂ ಅವರು ಉತ್ತರ ಕೊಡುವುದಿಲ್ಲ ಎಂಬುದು ಅಭಿಮಾನಿಗಳಿಗೆ ಗೊತ್ತಿರುವ ವಿಚಾರ ಆಗಿದೆ.

ಭಾನುವಾರ ರಾತ್ರಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ಅವರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅವರು ಬಿಳಿ ಟಿ–ಶರ್ಟ್‌ ಹಾಗೂ ಶಾರ್ಟ್ಸ್‌ ಹಾಕಿರುವ ವಿಡಿಯೊಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈ ವಿಡಿಯೊ ಸಿಕ್ಕಾಪಟ್ಟೆ ಶೇರ್‌ ಆಗುತ್ತಿದೆ.

ವೈರಲ್‌ಭವಾನಿ ಎಂಬ ಇನ್‌ಸ್ಟಾಗ್ರಾಂ ಖಾತೆಯವರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಕೆಲವು ಅಭಿಮಾನಿಗಳು ರಶ್ಮಿಕಾ ನಿಮ್ಮ ಪ್ಯಾಂಟ್‌ ಎಲ್ಲಿ? ಎಂದು ಕೇಳುತ್ತಿದ್ದಾರೆ. ಇನ್ನು ಕೆಲವರು ರಶ್ಮಿಕಾ ನೀವು ಸಖತ್‌ ಹಾಟ್‌ ಎಂದು ಕಾಮೆಂಟ್‌ ಹಾಕಿದ್ದಾರೆ.

ರಶ್ಮಿಕಾ ಮಂದಣ್ಣ ಕೈಯಲ್ಲಿ ಈಗ ಹಲವು ಸಿನಿಮಾಗಳು ಇದ್ದು, ಬಾಲಿವುಡ್‌ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರ ಜೊತೆ ‘ಮಿಷನ್ ಮಜ್ನು’ ಹಾಗೂ ವಿಕಾಸ್ ಬಹ್ಲ್ ಅವರ ನಿರ್ದೇಶನದ ಗುಡ್ ಬೈ ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಶರ್ವಾನಂದ ಜೊತೆಗೆ ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾದಲ್ಲೂ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT