ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಬಿ ಮುಂದೆ ನಟಿ ದೀಪಿಕಾ ಪಡುಕೋಣೆ ಹೇಳಿದ ‘ಮಾಲ್’ ಕಥೆ ಏನು ಗೊತ್ತೇ?

Last Updated 30 ಸೆಪ್ಟೆಂಬರ್ 2020, 8:33 IST
ಅಕ್ಷರ ಗಾತ್ರ

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣದ ಸುತ್ತ ಡ್ರಗ್ಸ್‌ ಜಾಲದ ನಂಟಿರುವ ಬಗ್ಗೆ ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ)ಯು ತನಿಖೆ ನಡೆಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್‌, ಶ್ರದ್ಧಾ ಕಪೂರ್‌ ಹಾಗೂ ಕರಿಷ್ಮಾ ಪ್ರಕಾಶ್‌ ಎನ್‌ಸಿಬಿಯಿಂದ ವಿಚಾರಣೆ ಎದುರಿಸಿದ್ದಾರೆ.

2017ರಲ್ಲಿ ದೀಪಿಕಾ ಮತ್ತು ಆಕೆಯ ಮ್ಯಾನೇಜರ್ ಕರಿಷ್ಮಾ ನಡುವೆ ವಾಟ್ಸ್ಆ್ಯಪ್‌ನಲ್ಲಿ ನಡೆದಿರುವ ಸಂದೇಶ ವಿನಿಮಯ ಆಧರಿಸಿಯೇ ಎನ್‌ಸಿಬಿ ಈ ಇಬ್ಬರಿಗೂ ನೋಟಿಸ್‌ ನೀಡಿತ್ತು. ‘ಡಿ’ ಮತ್ತು ‘ಕೆ’ ಎಂಬ ಅಕ್ಷರದಲ್ಲಿ ಈ ಸಂದೇಶ ವಿನಿಮಯ ನಡೆದಿತ್ತು. ‘ಡಿ’ ಎಂದರೆ ದೀಪಿಕಾ ಪಡುಕೋಣೆ ಮತ್ತು ‘ಕೆ’ ಎಂದರೆ ಕರಿಷ್ಮಾ ಎಂದು ಹೇಳಲಾಗಿತ್ತು.

‘ನನಗೆ ಗಾಂಜಾ ಬೇಡ; ಮಾಲ್‌ ಇದ್ದರೆ ಬೇಕಿತ್ತು’ ಎಂದು ದೀಪಿಕಾ ಅವರು, ಕರಿಷ್ಮಾಗೆ ರವಾನಿಸಿದ್ದ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಸಂದೇಶ ವಿನಿಯಮದ ವೇಳೆ ನಮೂದಾಗಿರುವ ‘ಮಾಲ್‌’ ಬಗ್ಗೆ ದೀಪಿಕಾ ಮತ್ತು ಕರಿಷ್ಮಾ ಎನ್‌ಸಿಬಿ ಮುಂದೆ ನೀಡಿರುವ ವಿವರಣೆಯೂ ಅಷ್ಟೇ ಕುತೂಹಲಕಾರಿಯಾಗಿದೆ. ಮಾಲ್‌, ಹ್ಯಾಷ್‌, ಧೂಮ್‌ ಎಂಬುದು ಗುಪ್ತ ಸಂಕೇತ. ತಾವು ಪ್ರತಿದಿನ ಸೇದುವ ಸಿಗರೇಟ್‌ಗಳಿಗೆ ಈ ಗುಪ್ತ ಕೋಡ್‌ಗಳನ್ನು ಇಟ್ಟುಕೊಂಡಿದ್ದೇವೆ ಎಂದು ಎನ್‌ಸಿಬಿ ಮುಂದೆ ಇಬ್ಬರೂ ಹೇಳಿಕೆ ನೀಡಿದ್ದಾರೆ. ಸಣ್ಣ ಮತ್ತು ಉತ್ತಮ ಗುಣಮಟ್ಟದ ಸಿಗರೇಟ್‌ಗೆ ಹ್ಯಾಷ್‌, ಮಾಲ್ ಹಾಗೂ ಒಳ್ಳೆಯ ಗುಣಮಟ್ಟದ ಸಿಗರೇಟ್‌ಗೆ ಧೂಮ್‌ ಎಂದು ಹೆಸರಿಟ್ಟಿದ್ದಾರಂತೆ.

ಇಬ್ಬರನ್ನೂ ಪ್ರತ್ಯೇಕವಾಗಿ ಹಾಗೂ ಒಟ್ಟಾಗಿಯೂ ಎನ್‌ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗುಪ್ತ ಸಂಕೇತದ ಬಗ್ಗೆ ವಿವರಣೆ ನೀಡಿದ್ದಾರಂತೆ. ವಿಚಾರಣೆ ವೇಳೆ ಡಿಪ್ಪಿ ಮತ್ತು ಕರಿಷ್ಮಾ ನೀಡಿರುವ ಉತ್ತರ ಸದ್ಯಕ್ಕೆ ಎನ್‌ಸಿಬಿ ಅಧಿಕಾರಿಗಳಿಗೆ ಒಪ್ಪಿಗೆಯಾಗಿದೆ ಎಂಬ ಸುದ್ದಿಯಿದೆ. ಈ ಪ್ರಕರಣ ಸಂಬಂಧ ಇನ್ನೂ ನಾಲ್ವರ ವಿಚಾರಣೆ ಬಾಕಿಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT