‘ನಂದ ಗೋಕುಲ’ ಧಾರಾವಾಹಿಯಿಂದ ನಟನೆ ಆರಂಭಿಸಿದ ಯಶ್ ಅವರು, ಬಳಿಕ ಸಾಲು ಸಾಲು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
'ರಾಕಿ' ಸಿನಿಮಾ ಮೂಲಕ ಮೊದಲು ನಾಯಕನಾಗಿ ಕಾಣಿಸಿಕೊಂಡಿದ್ದ ಯಶ್, ಮೊಗ್ಗಿನ ಮನಸ್ಸು, ಮೊದಲ ಸಲ ಚಿತ್ರದ ಮೂಲಕ ಜನಪ್ರಿಯರಾದರು.
ಪವನ್ ಒಡೆಯರ್ ನಿರ್ದೇಶನದ ‘ಗೂಗ್ಲಿ’ ಚಿತ್ರದಲ್ಲಿ ಯಶ್ ಉದ್ಯಮಿ ಶರತ್ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದರು. ಆದಾದ ಬಳಿಕ 'ರಾಜಾಹುಲಿ', 'ಗಜಕೇಸರಿ' ಸೇರಿದಂತೆ ಇತರೆ ಸಿನಿಮಾಗಳಲ್ಲಿ ನಟಿಸಿದ್ದಾರೆ.
ರಾಧಿಕಾ ಪಂಡಿತ್ ಜತೆಗೆ ‘ಮೊಗ್ಗಿನ ಮನಸ್ಸು’, 'Mr. and Mrs. ರಾಮಾಚಾರಿ’, ‘ಸಂತು ಸ್ಟ್ರೇಟ್ ಫಾರ್ವರ್ಡ್’ ಚಿತ್ರಗಳಲ್ಲಿ ನಟಿಸಿದ್ದಾರೆ.
ಕಿರುತೆರೆಯಲ್ಲಿ ಒಟ್ಟಾಗಿ ನಟಿಸಿ, ನಂತರ ಹಿರಿತೆರೆಗೆ ಬಂದ ಯಶ್ ಹಾಗೂ ರಾಧಿಕಾ ಪಂಡಿತ್ ಪರಸ್ಪರ ಪ್ರೀತಿಸಿ 2016ರ ಡಿಸೆಂಬರ್ 9ರಂದು ವಿವಾಹವಾಗಿದ್ದರು.
‘ಕೆಜಿಎಫ್’ ಚಿತ್ರ ವಿಶ್ವದಾದ್ಯಂತ ಬಿಡುಗಡೆಯ ಬಳಿಕ ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಯಶ್ ಅವರ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಸದ್ಯ, ರಾಕಿಂಗ್ ಸ್ಟಾರ್ ಯಶ್ ಅವರು ಮುಂಬರುವ ‘ಟಾಕ್ಸಿಕ್’ ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.