ಶುಕ್ರವಾರ, ಮೇ 27, 2022
26 °C

ಮೇ 20ಕ್ಕೆ ಜೀ5ನಲ್ಲಿ ಆರ್‌ಆರ್‌ಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳಿಗೆ ಈ ವರ್ಷ ಡಬಲ್‌ ಧಮಾಕ. ಮೇ 20ರಂದು ಜೂನಿಯರ್‌ ಎನ್‌ಟಿಆರ್‌ ಜನ್ಮದಿನ. ಅದೇ ದಿನ ಅವರ ನಟನೆಯ, ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ‘ರೌದ್ರ–ರಣ–ರುಧಿರ’(ಆರ್‌ಆರ್‌ಆರ್‌) ಒಟಿಟಿ ವೇದಿಕೆ ಜೀ5ನಲ್ಲಿ ಬಿಡುಗಡೆಯಾಗಲಿದೆ.

ಮಾರ್ಚ್‌ 24ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಆರ್‌ಆರ್‌ಆರ್‌ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದಿತ್ತು. ಚಿತ್ರವು ಇಲ್ಲಿಯವರೆಗೆ ₹1,100 ಕೋಟಿ ಬಾಚಿದ್ದು, ರಾಮ್-ಭೀಮ್ ಪವರ್‌ಫುಲ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು. ಐವತ್ತು ದಿನ ಪೂರೈಸಿದ ಸಂಭ್ರಮದಲ್ಲೇ ಒಟಿಟಿ ಬಿಡುಗಡೆ ದಿನಾಂಕವನ್ನೂ ಚಿತ್ರತಂಡ ಘೋಷಿಸಿದೆ.

ಓದಿ... ಬಾಲಿವುಡ್‌ಗೆ ನನ್ನನ್ನು ಭರಿಸಲಾಗದು: ಮಹೇಶ್ ಬಾಬು ಹೇಳಿಕೆಗೆ ಕಂಗನಾ ಪ್ರತಿಕ್ರಿಯೆ 

ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿತ್ತು. ಕನ್ನಡದಲ್ಲಿ ಸ್ವತಃ ಜೂನಿಯರ್ ಎನ್‌ಟಿಆರ್‌ ಹಾಗೂ ರಾಮ್‌ಚರಣ್ ಡಬ್ ಮಾಡಿದ್ದರು. ಇದೀಗ ಜೀ5 ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರದ ಹೊಸ ಟ್ರೇಲರ್‌ ಅನ್ನು ನಟ ಶಿವರಾಜ್‌ಕುಮಾರ್‌ ಅನಾವರಣಗೊಳಿಸಿದ್ದಾರೆ. 4ಕೆ ಕ್ವಾಲಿಟಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡವು ತಿಳಿಸಿದೆ.

ಓದಿ...

 ಸಲ್ಮಾನ್ ಶುಭ ಹಾರೈಕೆ ಬೆನ್ನಲ್ಲೇ ಚಿತ್ರರಂಗದಲ್ಲಿ ನಾನು ಒಬ್ಬಂಟಿಯಲ್ಲವೆಂದ ಕಂಗನಾ!

ಸುಧಾ ಮೂರ್ತಿ ಅವರನ್ನು ಭೇಟಿಯಾದ ರಾಬರ್ಟ್ ಬೆಡಗಿ ‘ಆಶಾ ಭಟ್’; ಫೋಟೊ ವೈರಲ್

 ನ್ಯೂಯಾರ್ಕ್‌ನಲ್ಲಿರುವ ಪ್ರಿಯಾಂಕಾ ರೆಸ್ಟೋರೆಂಟ್‌ಗೆ ವಿಕ್ಕಿ– ಕತ್ರಿನಾ ಭೇಟಿ 

41ನೇ ವಸಂತಕ್ಕೆ ಕಾಲಿಟ್ಟ ಮಾದಕ ತಾರೆ ಸನ್ನಿ ಲಿಯೋನ್: ಅಭಿಮಾನಿಗಳಿಂದ ಶುಭ ಹಾರೈಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು