ಸೋಮವಾರ, ಆಗಸ್ಟ್ 2, 2021
20 °C

ಹೊಲದಲ್ಲಿ ಶ್ರಮಿಸುತ್ತಿರುವ ಸಲ್ಮಾನ್‌ ಖಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಾಕ್‌ಡೌನ್ ಆರಂಭವಾದಾಗಿನಿಂದ ಸಿನಿಮಾ ಸೆಲೆಬ್ರಿಟಿಗಳು ಒಂದಲ್ಲ ಒಂದು ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ತಾವು ಮಾಡಿರುವ ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಂದ ಶಹಭಾಸ್ ಗಿರಿ ಪಡೆದುಕೊಳ್ಳುತ್ತಿದ್ದಾರೆ. 

ಈಗ ಆ ಸಾಲಿಗೆ ನಟ ಸಲ್ಮಾನ್ ಖಾನ್ ಸೇರುತ್ತಾರೆ. ಮುಂಬೈನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣದಿಂದ ಲೋನಾವಾಲದ ಪನ್ವೆಲ್ ಫಾರ್ಮ್‌ಹೌಸ್‌ನಲ್ಲಿ ಬೀಡು ಬಿಟ್ಟಿದ್ದಾರೆ ಸಲ್ಮಾನ್‌. ಜೊತೆಗೆ ಕೃಷಿ ಚಟುವಟಿಕೆಯಲ್ಲೂ ತೊಡಗಿದ್ದಾರೆ. ಆ ಮೂಲಕ ರೈತರ ಕಷ್ಟವನ್ನು ಅರಿಯುವ ಮನಸ್ಸು ಮಾಡಿದ್ದಾರೆ. ಜೊತೆಗೆ ಸಮೀಪದ ಹಳ್ಳಿಗಳಲ್ಲಿ ಸೈಕ್ಲಿಂಗ್ ಮಾಡುವ ಮೂಲಕ ಸಮಯ ಕಳೆಯುತ್ತಿದ್ದಾರೆ. 

ಕಳೆದ ಕೆಲ ದಿನಗಳ ಹಿಂದೆ ಗದ್ದೆಯಲ್ಲಿರುವ ನಾಟಿ ಮಾಡುವ ಚಿತ್ರ ಹಂಚಿಕೊಂಡಿರುವ ಸಲ್ಮಾನ್ ಆ ಮೂಲಕ ರೈತರನ್ನು ಸ್ಮರಿಸಿದ್ದರು. ನಿನ್ನೆ (ಮಂಗಳವಾರ) ಮತ್ತೆ ಕೆಸರು ಮಣ್ಣು ಬಳಿದುಕೊಂಡು ಕುಳಿತಿರುವ ಫೋಟೊ ಹಂಚಿಕೊಂಡ ಸಲ್ಮಾನ್ ‘ಎಲ್ಲಾ ರೈತರಿಗೂ ಗೌರವ ನೀಡಿ’ ಎಂದು ಬರೆದುಕೊಂಡಿದ್ದಾರೆ. 

 
 
 
 

 
 
 
 
 
 
 
 
 

Respect to all the farmers . .

A post shared by Salman Khan (@beingsalmankhan) on

ಸಲ್ಮಾನ್‌ ಸದ್ಯಕ್ಕೆ ರಾಧೆ ಚಿತ್ರದಲ್ಲಿ ನಟಿಸುತ್ತಿದ್ದು ಪ್ರಭುದೇವ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಚಿತ್ರದಲ್ಲಿ ರಣದೀಪ್‌ ಹೂಡಾ, ಜಾಕಿ ಶ್ರಾಫ್‌ ಸೇರಿದಂತೆ ಅನೇಕರು ನಟಿಸಲಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು