ಶುಕ್ರವಾರ, ಜನವರಿ 27, 2023
19 °C

ಟೈಗರ್–3: ರಷ್ಯಾದಲ್ಲಿ ಸಲ್ಮಾನ್‌–ಕತ್ರಿನಾ ರೊಮ್ಯಾನ್ಸ್‌ 

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನಟ ಸಲ್ಮಾನ್‌ ಖಾನ್‌ ಹಾಗೂ ಅವರ ಮಾಜಿ ಗೆಳತಿ ಕತ್ರಿನಾ ಕೈಫ್‌ ಮತ್ತೆ ಒಂದಾಗಿದ್ದು ರೊಮ್ಯಾನ್ಸ್‌ ಮಾಡಲು ರಷ್ಯಾಗೆ ಹೋಗಲಿದ್ದಾರೆ ಎಂಬ ಮಾಹಿತಿ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ.

ಸಲ್ಲು ಬಾಯ್‌ ಮತ್ತು ಕತ್ರಿನಾ ರೊಮ್ಯಾನ್ಸ್‌ ಮಾಡುತ್ತಿರುವುದ ಟೈಗರ್‌–3 ಸಿನಿಮಾದಲ್ಲಿ. ಹೌದು, ಈ ಜೋಡಿ ಸಿನಿಮಾದ ಚಿತ್ರೀಕರಣಕ್ಕಾಗಿ ನಾಳೆ (ಆ.18) ರಷ್ಯಾಗೆ ಪ್ರಯಾಣ ಬೆಳಸಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ.

ಈಗಾಗಲೇ ಟೈಗರ್–3 ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಂಬೈನಲ್ಲಿ ಮುಕ್ತಾಯವಾಗಿದೆ. ಇದರಲ್ಲಿ ಕತ್ರಿನಾ ಕೂಡ ಭಾಗಿಯಾಗಿದ್ದರು. ಇದೀಗ ರಷ್ಯಾ, ಆಸ್ಟ್ರೀಯ ಹಾಗೂ ಟರ್ಕಿಯಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ನಾಳೆಯಿಂದ (ಆಗಸ್ಟ್ 18) ಪ್ರಯಾಣ ಬೆಳೆಸಲಿರುವ ಚಿತ್ರತಂಡ 45 ದಿನಗಳ ಕಾಲ ವಿದೇಶಗಳಲ್ಲಿ ತಂಗಲಿದೆ. 

ಮನಿಶ್ ಶರ್ಮಾ ಟೈಗರ್‌–3 ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲೂ ಸಲ್ಮಾನ್ ಮತ್ತು ಕತ್ರಿನಾ, ಟೈಗರ್ ಹಾಗೂ ಜೋಯಾ ಪಾತ್ರಗಳಲ್ಲಿ ಮುಂದುವರೆದಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು