ಸೋಮವಾರ, ಮಾರ್ಚ್ 27, 2023
32 °C

‘ದಿಯಾ’ ರಿಮೇಕ್‌ನಲ್ಲಿ‌ ಸಮಂತಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಿಮೇಕ್ ಚಿತ್ರಗಳು ಯಶಸ್ಸು ಕಂಡರೇ ಅದೇ ಹಾದಿಯಲ್ಲಿ ಪಯಣಿಸುವುದು ನಟ, ನಟಿಯರಿಗೆ ಹೊಸದೇನಲ್ಲ. ಡಬ್ಬಿಂಗ್ ನಡುವೆಯೂ ಗಲ್ಲಾಪೆಟ್ಟಿಗೆಯಲ್ಲಿ ಸಕ್ಸಸ್ ಕಂಡ‌ ಸಿನಿಮಾಗಳು ರಿಮೇಕ್ ಆಗುತ್ತಿವೆ. ಭಾರತೀಯ ಭಾಷೆಗಳಿಗಷ್ಟೇ ಈ ಬೆಳವಣಿಗೆ ಸೀಮಿತಗೊಂಡಿಲ್ಲ. ಕೊರಿಯನ್, ಫ್ರೆಂಚ್ ಸಿನಿಮಾಗಳು ರಿಮೇಕ್ ಆಗುತ್ತಿವೆ.

ಕಳೆದ ವರ್ಷ ಸಮಂತಾ ಅಕ್ಕಿನೇನಿ ನಟಿಸಿದ್ದ ‘ಓ ಬೇಬಿ’ ಚಿತ್ರ ಸೂಪರ್‌ ಹಿಟ್ ಆಗಿತ್ತು. ಇದು‌ ಕೊರಿಯನ್ ಚಿತ್ರ ‘ಮಿಸ್ ಗ್ರ್ಯಾನಿ’ಯ ತೆಲುಗು ರಿಮೇಕ್.

ಈ ಫ್ಯಾಂಟಸಿ ಕಾಮಿಡಿ ಕಥನಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು‌‌ ನಂದಿನಿ ರೆಡ್ಡಿ. ಈ ಚಿತ್ರ ಬಿಡುಗಡೆ ವೇಳೆಯೇ ಸಮಂತಾ ಫ್ರೆಂಚ್ ರಿಮೇಕ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ‌ ಹರಡಿತ್ತು. ಆದರೆ, ಅದು ಅಧಿಕೃತವಾಗಿ ಘೋಷಣೆಯಾಗಲಿಲ್ಲ.

ಇತ್ತೀಚೆಗೆ ಆಕೆ‌ ರಿಮೇಕ್ ಕಡೆತ ಹೆಚ್ಚು ಒಲವು ಹೊಂದಿರುವುದು ಗುಟ್ಟೇನಲ್ಲ. ಲಾಕ್ ಡೌನ್ ಪರಿಣಾಮ ಸಮಂತಾ ಮನೆಯಲ್ಲಿಯೇ ಇದ್ದಾರೆ. ಹೊಸ ಸ್ಕ್ರಿಪ್ಟ್ ಗಳನ್ನು ಅವರು ಕೇಳುತ್ತಿದ್ದಾರಂತೆ‌. ಈ ನಡುವೆಯೇ ಅವರು‌‌ ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯವಿರುವ ಕನ್ನಡದ ‘ದಿಯಾ’ ಚಿತ್ರ ‌ವೀಕ್ಷಿಸಿದ್ದು, ಇಂಪ್ರೆಸ್ ಆಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಇತ್ತೀಚೆಗೆ ತೆರೆಕಂಡ ‘ದಿಯಾ’ ಸಿನಿಮಾಕ್ಕೆ‌ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರೀತಿ ವೈಫಲ್ಯ ಅನುಭವಿಸಿದ ಅಂತರ್ಮುಖಿ ಹುಡುಗಿಯೊಬ್ಬಳ ಸುತ್ತ ಹೆಣೆದ ಕಥೆ ಇದು. ತೆಲುಗಿನ ನಿರ್ಮಾಪಕರೊಬ್ಬರು ‘ದಿಯಾ’ ಚಿತ್ರದ ಬಗ್ಗೆ ಸಮಂತಾ ಜೊತೆಗೆ ಚರ್ಚಿಸಿದ್ದಾರಂತೆ.

ಈಗಾಗಲೇ, ಆಕೆ ರಿಮೇಕ್ ಚಿತ್ರಗಳಾದ ‘ಯು ಟರ್ನ್’, ‘ಓ ಬೇಬಿ’, ಮತ್ತು ‘ಜಾನು’ನಲ್ಲಿ ನಟಿಸಿದ್ದಾರೆ. ಹಾಗಾಗಿ,
ಕನ್ನಡದ ರಿಮೇಕ್ ‌ನಲ್ಲೂ‌‌ ನಟಿಸಲು ಹಸಿರು‌ ನಿಶಾನೆ‌ ತೋರಿದರೂ ಅಚ್ಚರಿಪಡಬೇಕಿಲ್ಲ ಎಂಬುದು ಟಾಲಿವುಡ್ ಪಡಸಾಲೆಯಿಂದ ಕೇಳಿಬರುತ್ತಿರುವ ಮಾತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು