ಬೆಂಗಳೂರು:ಲೈಂಗಿಕತೆಯ ವಿಚಾರದಲ್ಲಿಮಹಿಳೆಯರನ್ನುಆಕ್ಷೇಪಿಸುವ ಕುರಿತುನಟಿ ಸಮಂತಾ ರೂತ್ ಪ್ರಭು ಅವರು ಅಭಿಪ್ರಾಯವೊಂದನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್ ಸ್ಟೋರಿಸ್‌ನಲ್ಲಿಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡಿರುವ ಅವರು, ‘ಲೈಂಗಿಕತೆಯ ವಿಚಾರದಲ್ಲಿಮಗಳಿಗೆಬುದ್ದಿ ಹೇಳಿಕೊಡಬೇಡಿ. ಅದರ ಬದಲು ಮಹಿಳೆಯರನ್ನು ನಿಯಂತ್ರಿಸದಂತೆಮಗನಿಗೆಕಲಿಸಿಕೊಡಿ. ಏಕೆಂದರೆ, ನಿಮ್ಮ ಮಗಳಿಗೆ ಲೈಂಗಿಕತೆಯ ಹಕ್ಕನ್ನು ನಿರಾಕರಿಸುವುದು, ಅವಳನ್ನು ವಸ್ತುವನ್ನಾಗಿಸುವ ಇನ್ನೊಂದು ಮಾರ್ಗವಾಗಿದೆ'ಎಂದು ಸಮಂತಾ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ನಟಿ ಸಮಂತಾ ರುತ್ ಪ್ರಭು ಅವರು ಅಲ್ಲು ಅರ್ಜುನ್ ನಟನೆಯ ‘ಪುಷ್ಪ‘ ಚಿತ್ರದಲ್ಲಿ ‘ಊಅಂಟಾವಾ’ ಎಂಬ ಐಟಂ ಡ್ಯಾನ್ಸ್‌ನಲ್ಲಿ ಕುಣಿದು ಸುದ್ದಿಯಾಗಿದ್ದರು.ಅವರ ಮಾದಕ ನೃತ್ಯಕ್ಕೆಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದ ಸಮಂತಾ ಅವರು ವಿರೋಧದ ಮಾತುಗಳನ್ನು ಕೇಳುವ ಜತೆಗೆ ಟ್ರೋಲ್‌ಗೆ ಒಳಗಾಗಿದ್ದರು.

ಟೀಕೆಗಳಿಗೆಇನ್‌ಸ್ಟಾಗ್ರಾಮ್‌ನಲ್ಲಿ ಉತ್ತರಿಸಿದ್ದಅವರು, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.

ಸಮಂತಾ ಅವರು ಇತ್ತೀಚೆಗೆ ನಟ ನಾಗಾ ಚೈತನ್ಯರಿಂದ ವಿಚ್ಛೇದನ ಪಡೆದಿದ್ದು, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.