ಬರುವುದೆಲ್ಲ ಬರಲಿ, ಅದನ್ನು ಎದುರಿಸಬೇಕು, ಜೀವನ ಸಾಗಬೇಕು: ಸಮಂತಾ

ಬೆಂಗಳೂರು: ನಟಿ ಸಮಂತಾ ರುತ್ ಪ್ರಭು ಅವರು ನಾಗ ಚೈತನ್ಯ ಜತೆಗಿನ ಮದುವೆ ಮುರಿದು ತಿಂಗಳುಗಳೇ ಕಳೆದಿವೆ. ಆದರೆ ಈಗಲೂ ಇವರಿಬ್ಬರ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಚರ್ಚೆ ನಡೆದಿದೆ.
ಸಮಂತಾ, ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿದ್ದುಕೊಂಡು, ವಿವಿಧ ಪೋಸ್ಟ್‌ಗಳನ್ನು ಮಾಡುತ್ತಿರುತ್ತಾರೆ.
ವಿಚ್ಛೇದನದ ಬಳಿಕ ಅವರು ತಮ್ಮ ನೋವನ್ನು ತೋಡಿಕೊಂಡು, ಯಾವೆಲ್ಲ ಕಷ್ಟಗಳನ್ನು ಎದುರಿಸಿದೆ ಎಂದು ಹೇಳಿಕೊಂಡಿದ್ದರು.
ಅಲ್ಲದೆ, ಈಗ ಮತ್ತೊಮ್ಮೆ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಅವರು, ಬರುವುದೆಲ್ಲಾ ಬರಲಿ, ಅದನ್ನು ಎದುರಿಸಬೇಕು, ಜೀವನ ಸಾಗಬೇಕು ಎಂದು ಪೋಸ್ಟ್ ಮಾಡಿದ್ದಾರೆ..

ಈ ರೀತಿಯಾಗಿ ಜೀವನ ಸಂದೇಶದ ಪೋಸ್ಟ್ ಮಾಡಿರುವುದನ್ನು ಕಂಡು ಜನರು, ಸಮಂತಾ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಆಕರ್ಷಕ ವಿನ್ಯಾಸದ ಗೌನ್ ತೊಟ್ಟು ಸಂಭ್ರಮಿಸಿದ ಮೌನಿ ರಾಯ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.