ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗ ಚೈತನ್ಯ ಜತೆಗಿನ ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ: ಹೇಳಿದ್ದೇನು?

ಮುಂಬೈ: ತೆಲುಗು ನಟ ಅಕ್ಕಿನೇನಿ ನಾಗ ಚೈತನ್ಯ ಅವರಿಂದ ನಟಿ ಸಮಂತಾ ರುತ್ ಪ್ರಭು ವಿಚ್ಛೇದನ ಪಡೆದ ಬಳಿಕ ಈ ವಿಚಾರದ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ, ಇದೀಗ ತಮ್ಮ ವಿಚ್ಛೇದನ ಕುರಿತು ಮೌನ ಮುರಿದಿದ್ದಾರೆ.

ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದು 1 ವರ್ಷ ಆಗುತ್ತಿದೆ. ಪ್ರತ್ಯೇಕವಾದ ಬಳಿಕ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ಈ ಸೆಲೆಬ್ರಿಟಿ ದಂಪತಿ ವಿಚ್ಛೇದನ​ ಪಡೆದಿದ್ದು ಯಾಕೆ ಎಂಬುದು ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ. ಸಮಂತಾ ಮತ್ತು ನಾಗ ಚೈತನ್ಯ ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇಬ್ಬರ ನಡುವೆ ಮನಸ್ತಾಪ ಮೂಡಿದ್ದರಿಂದ ಸಂಸಾರಿಕ ಜೀವನದಲ್ಲಿ ಬಿರುಕು ಉಂಟಾಗಿತ್ತು. ಅಂತಿಮವಾಗಿ ಇಬ್ಬರ ನಡುವಿನ ಸಂಬಂಧ ವಿಚ್ಛೇದನದ ಮೂಲಕ ಮುರಿದುಬಿದ್ದಿದೆ.

ನಾಗ ಚೈತನ್ಯ ಅವರಿಂದ ವಿಚ್ಛೇದನ​ ಪಡೆದ ನಂತರ ತಾವು ಎದುರಿಸಿದ ಸವಾಲುಗಳ ಬಗ್ಗೆ ಸಮಂತಾ ‘ಕಾಫಿ ವಿತ್​ ಕರಣ್​ ಸೀಸನ್ 7’​ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಈ ಶೋ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಪ್ರಸಾರವಾಗುತ್ತಿದ್ದು, ಬಾಲಿವುಡ್‌ ನಟ ಅಕ್ಷಯ್​ ಕುಮಾರ್​ ಅವರೊಂದಿಗೆ ಸಮಂತಾ ಅತಿಥಿಯಾಗಿ ಭಾಗವಹಿಸಿದ್ದರು. ನಿರೂಪಕ ಕರಣ್​ ಜೋಹರ್​ ಕೇಳಿದ ಹಲವು ಪ್ರಶ್ನೆಗಳಿಗೆ ಸಮಂತಾ ಉತ್ತರಿಸಿದ್ದಾರೆ.

ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಸಮಂತಾ ವಿವರಿಸಿದ್ದಾರೆ. ‘ಕೆಲಕಾಲ ತುಂಬ ಕಷ್ಟಕರವಾಗಿತ್ತು’ ಎಂದು ಹೇಳಿಕೊಂಡಿದ್ದಾರೆ. ಆದರೆ, ಈಗ ಪರಿಸ್ಥಿತಿ ಸುಧಾರಿಸಿದ್ದು, ಹಿಂದೆಂದಿಗಿಂತಲೂ ಹೆಚ್ಚು ಬಲಶಾಲಿಯಾಗಿದ್ದೇನೆ’ ಎಂದು ಸಮಂತಾ ತಿಳಿಸಿದ್ದಾರೆ.

ಸದ್ಯ ಸಮಂತಾ ತೆಲುಗಿನ ‘ಖುಷಿ’, ‘ಯಶೋದಾ’, ‘ಶಾಕುಂತಲಂ’ ಮುಂತಾದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಹಾಲಿವುಡ್‌ ನಿರ್ದೇಶಕ ಫಿಲಿಪ್‌ ಜಾನ್‌ ಅವರ ಜತೆ ‘ಅರೆಂಜ್‌ಮೆಂಟ್ಸ್‌ ಆಫ್ ಲವ್’ ಸಿನಿಮಾದಲ್ಲಿ ಸಮಂತಾ ಅಭಿನಯಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT