ವಿಚ್ಛೇದನದ ಬಳಿಕ ಹೊಸ ಚಿತ್ರಕ್ಕೆ ಸಹಿ ಹಾಕಿದ ಸಮಂತಾ ರುತ್ ಪ್ರಭು

ಬೆಂಗಳೂರು: ತೆಲುಗು ನಟ ಅಕ್ಕಿನೇನಿ ನಾಗ ಚೈತನ್ಯ ಅವರ ಜತೆಗಿನ ದಾಂಪತ್ಯ ಜೀವನವನ್ನು ವಿಚ್ಛೇದನದಲ್ಲಿ ಕೊನೆಗೊಳಿಸಿದ ಸಮಂತಾ ರುತ್ ಪ್ರಭು ವಿವಿಧ ಕಾರಣಗಳಿಂದ ಸುದ್ದಿಯಲ್ಲಿದ್ದಾರೆ.
ಸಾಮಾಜಿಕ ತಾಣಗಳಲ್ಲಿ ಖಾತೆ ಹೆಸರು ಬದಲಾವಣೆ, ತಮ್ಮ ವಿರುದ್ಧದ ಆರೋಪ ಮತ್ತು ಹೇಳಿಕೆಗಳಿಗೆ ಸ್ಪಷ್ಟನೆ ನೀಡಿದ ಬಳಿಕ ನಟಿ ಸಮಂತಾ ರುತ್ ಪ್ರಭು ಹೊಸ ಜೀವನ ಆರಂಭಿಸಲು ಮುಂದಾಗಿದ್ದಾರೆ.
ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಾಣದ ಪ್ರೊಡಕ್ಷನ್ ನಂ: 30 ಚಿತ್ರಕ್ಕೆ ಸಮಂತಾ ಸಹಿ ಹಾಕಿದ್ದಾರೆ. ಈ ಚಿತ್ರ ಎರಡು ಭಾಷೆಗಳಲ್ಲಿ ತಯಾರಾಗಲಿದೆ.
ಶಾಂತರುಬನ್ ಜ್ಞಾನಶೇಖರನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಹೊಸ ಚಿತ್ರದ ಕುರಿತು ಡ್ರೀಮ್ ವಾರಿಯರ್ ಪಿಕ್ಚರ್ಸ್ ಟ್ವೀಟ್ ಮಾಡಿದೆ.
We are happy to announce that @Samanthaprabhu2 is on board for our next! Directed by @Shantharuban87. #ProductionNo30 pic.twitter.com/aV4kyvlJ5Z
— DreamWarriorPictures (@DreamWarriorpic) October 15, 2021
ವಿಚ್ಛೇದನ ಬಳಿಕ ಸಾಮಾಜಿಕ ತಾಣಗಳಲ್ಲಿ ಹೆಸರು ಬದಲಾಯಿಸಿಕೊಂಡ ಸಮಂತಾ
ತಮಿಳು ಮತ್ತು ತೆಲುಗಿನಲ್ಲಿ ಸಮಂತಾ ಅವರ ಹೊಸ ಚಿತ್ರ ತಯಾರಾಗುತ್ತಿದೆ. ಸಮಂತಾ ಅವರ ಚಿತ್ರವಿರುವ ಪೋಸ್ಟರ್ ಅನ್ನು ಕೂಡ ಚಿತ್ರ ನಿರ್ಮಾಣ ಸಂಸ್ಥೆ ಬಿಡುಗಡೆ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.