ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RCB ನಾಯಕ ’ಡು ಪ್ಲೆಸಿ’ ಭೇಟಿಯಾದ ನಟಿ ’ಸಂಯುಕ್ತಾ’: ತಲೆಕೆಡಿಸಿಕೊಂಡ ನೆಟ್ಟಿಗರು

Last Updated 14 ಮಾರ್ಚ್ 2022, 12:09 IST
ಅಕ್ಷರ ಗಾತ್ರ

’ಕಿರಿಕ್‌ ಪಾರ್ಟಿ’ ಸಿನಿಮಾದ ನಾಯಕಿ ಸಂಯುಕ್ತಾ ಹೆಗ್ಡೆ ಐಪಿಎಲ್‌ ಕಿಕ್ರೆಟ್‌ನ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ನೂತನ ನಾಯಕ ಫಫ್‌ ಡು ಪ್ಲೆಸಿ ಅವರನ್ನು ಭೇಟಿಯಾಗಿದ್ದಾರೆ.

ಫಫ್‌ ಡು ಪ್ಲೆಸಿ ಅವರನ್ನು ಭೇಟಿ ಮಾಡಿರುವ ಸಂಯುಕ್ತಾ ಅವರೊಂದಿಗೆ ಸೆಲ್ಫಿಫೋಟೊ ತೆಗೆದುಕೊಂಡಿದ್ದಾರೆ. ಈ ಫೋಟೊವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ.

ಈ ಫೋಟೊಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು ಶೇರ್‌ ಮಾಡುತ್ತಿದ್ದಾರೆ. ಕೆಲವರು ಡು ಪ್ಲೆಸಿ ಅವರನ್ನು ಯಾಕೆ ಭೇಟಿ ಮಾಡಿರಬಹುದು ಎಂದು ತಲೆಕೆಡಿಸಿಕೊಂಡಿದ್ದಾರೆ.ಮತ್ತೆ ಕೆಲವರು ಇಬ್ಬರ ಭೇಟಿಯ ಬಗ್ಗೆ ಕಾಮೆಂಟ್‌ ಬಾಕ್ಸ್‌ ನಲ್ಲಿ ಪ್ರಶ್ನಾರ್ಥಕ ಚಿನ್ಹೆ ಹಾಕಿದ್ದಾರೆ.

’ ಆರ್‌ಸಿಬಿ ಹೊಸ ನಾಯಕನಿಗೆ ಹಲೋ ಎನ್ನಿ. ಹೊಸ ಸೀಸನ್‌, ಹೊಸ ನಾಯಕ, ಹೊಸ ಜೆರ್ಸಿಗೆ ಹೊಸ ಉತ್ಸಾಹ ಸಿಕ್ಕಿದೆ. ಆರ್‌ಸಿಬಿ ತಂಡಕ್ಕೆ ಅದೇ ಬೆಂಬಲ ಇರುತ್ತೆ. ಈ ಕ್ಷಣಗಳ ಅದ್ಭುತ ಫೋಟೊಗಳನ್ನು ಶೇರ್ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ತಮಿಳಿನ ಖ್ಯಾತ ನಿರ್ದೇಶಕ ವೆಂಕಟ್ ಪ್ರಭು ನಿರ್ದೇಶನದ 'ಮನ್ಮಥ ಲೀಲೈ' ಸಿನಿಮಾದಲ್ಲಿ ಸಂಯುಕ್ತಾ ನಟಿಸಿದ್ದಾರೆ. ಈ ಚಿತ್ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT