ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ಯಾಡ್‌ ಬಾಯ್ಸ್‌’ ಹಾಡಿಗೆ ಎಐ ಸ್ಪರ್ಶ

Published 24 ಏಪ್ರಿಲ್ 2024, 17:58 IST
Last Updated 24 ಏಪ್ರಿಲ್ 2024, 17:58 IST
ಅಕ್ಷರ ಗಾತ್ರ

ಅರುಣ್‌ ಅಮುಕ್ತ ನಿರ್ದೇಶನದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದ್ದು, ಚಿತ್ರದ ಮೊದಲ ಹಾಡು ‘ಬ್ಯಾಡ್‌ ಬಾಯ್ಸ್‌’ ರಿಲೀಸ್‌ ಆಗಿದೆ. ವಿಶೇಷ ಏನೆಂದರೆ ಹಾಡಿಗೆ ‘ಎಐ’ ಸ್ಪರ್ಶ ನೀಡಿದೆ ಚಿತ್ರತಂಡ.

ಈ ಹಾಡಿಗೆ ವಿಜೇತ್ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು, ‘ಭರ್ಜರಿ’ ಚೇತನ್ ಕುಮಾರ್ ಸಾಹಿತ್ಯವಿದೆ. ವಿಜೇತ್ ಕೃಷ್ಣ, ಕೀರ್ತನಾ ಚಂದ್ರು ಮತ್ತು ಸುನೈನಾ ಹಾಡಿಗೆ ಧ್ವನಿಯಾಗಿದ್ದು, ಎಐ ತಂತ್ರಜ್ಞಾನ ಬಳಸಿ ಪಾತ್ರಗಳ ಆ್ಯನಿಮೇಷನ್‌ ಮಾಡಲಾಗಿದೆ. ‘ಬ್ಯಾಡ್‌ ಬಾಯ್ಸ್‌’ ಹಾಡನ್ನು ಅರುಣ್‌ ಸುರೇಶ್‌ ಸೆರೆಹಿಡಿದಿದ್ದಾರೆ. ಹಾಡಿನಲ್ಲಿ ಮನೋಜ್ ವಿವಾನ್, ಮನಸ್ವಿ, ಭಾವನಾ ಅಪ್ಪು, ಅಮರ್ ಮುಂತಾದವರು ಕಾಣಿಸಿಕೊಂಡಿದ್ದಾರೆ.

ಸುಬ್ರಹ್ಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಕುಮಾರ್ ಗೌಡ ಛಾಯಾಚಿತ್ರಗ್ರಹಣ, ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಚಂದನ್ ಶೆಟ್ಟಿ, ಮಾನಸಿ, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರ ಜೂನ್‌ಗೆ ತರೆಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT