ಪ್ರೀತಂ ಗುಬ್ಬಿ ನಿರ್ದೇಶನದ ‘ಬಾನದಾರಿಯಲ್ಲಿ’ ಹೀಗಿದ್ದಾರೆ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಕಾಂಬಿನೇಷನ್‌ನ ಹೊಸ ಚಿತ್ರದ ಶೀರ್ಷಿಕೆ ‘ಬಾನದಾರಿಯಲ್ಲಿ’ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಇದೀಗ ಚಿತ್ರತಂಡ ಹೊಸ ಅಪ್‌ಡೇಟ್ ನೀಡಿದ್ದು, ಚಿತ್ರದಲ್ಲಿನ ಗಣೇಶ್ ಅವರ ಫಸ್ಟ್‌ಲುಕ್ ರಿಲೀಸ್ ಆಗಿದೆ.
ಪ್ರೀತಂ ಗುಬ್ಬಿ ಆ್ಯಕ್ಷನ್ ಕಟ್ ಹೇಳಿದ್ದ ಸಿನಿಮಾಗಳೆಲ್ಲವೂ ಪ್ರೇಮಕಥೆಯನ್ನೇ ಹೊಂದಿದ್ದವು. ಹೊಸ ಚಿತ್ರವೂ ಇದೇ ಜಾನರ್‌ನ ಸಿನಿಮಾವೇ ಎನ್ನುವ ಪ್ರಶ್ನೆ ಗಣೇಶ್ ಅಭಿಮಾನಿಗಳಲ್ಲಿತ್ತು. ಇದಕ್ಕೆ ಟ್ವಿಟರ್‌ನಲ್ಲಿ ಉತ್ತರಿಸುವ ಗಣೇಶ್, ‘ಇದೊಂದು ಪ್ರೇಮಕಥೆಯಲ್ಲ. ಇದು ಪ್ರೇಮದ ಕುರಿತ ಕಥೆ’ ಎಂದಿದ್ದಾರೆ.
ಓದಿ... 41ನೇ ವಸಂತಕ್ಕೆ ಕಾಲಿಟ್ಟ ಮಾದಕ ತಾರೆ ಸನ್ನಿ ಲಿಯೋನ್: ಅಭಿಮಾನಿಗಳಿಂದ ಶುಭ ಹಾರೈಕೆ
ಗಣೇಶ್ ಅವರ ಸಿನಿಪಯಣಕ್ಕೆ ತಿರುವು ನೀಡಿದ್ದ ‘ಮುಂಗಾರು ಮಳೆ’ ಸಿನಿಮಾಗೆ ಕಥೆ ಬರೆದಿದ್ದ ಪ್ರೀತಂ ಗುಬ್ಬಿ, ಮತ್ತೊಂದು ಲವ್‌ಸ್ಟೋರಿಯೊಂದಿಗೆ ಬರುತ್ತಿದ್ದಾರೆ. ಗಣಿ–ಗುಬ್ಬಿ ಕಾಂಬಿನೇಷ್‌ನಲ್ಲಿ ಈ ಹಿಂದೆ ‘ಮಳೆಯಲಿ ಜೊತೆಯಲಿ’, ‘ದಿಲ್ ರಂಗೀಲಾ’ ಹಾಗೂ ‘99’ ಸಿನಿಮಾ ಮೂಡಿಬಂದಿತ್ತು. ‘ಬಾನದಾರಿಯಲ್ಲಿ’ ಸಿನಿಮಾದಲ್ಲಿ ಗಣೇಶ್‌ಗೆ ಜೋಡಿಯಾಗಿ ನಟಿ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳಲಿದ್ದಾರೆ.
ಓದಿ... ಸುಧಾ ಮೂರ್ತಿ ಅವರನ್ನು ಭೇಟಿಯಾದ ರಾಬರ್ಟ್ ಬೆಡಗಿ ‘ಆಶಾ ಭಟ್’; ಫೋಟೊ ವೈರಲ್
This is not a l̶o̶v̶e̶ ̶s̶t̶o̶r̶y̶,
This is a story about love! #Baanadariyalli@preethamgubbi @harimonium @rukminitweets @Reeshmananaiah #AbhilashKalathi #Preethaj @KRG_Studios @KRG_Connects #SrivaareTalkies pic.twitter.com/LID0vi1NlR— Ganesh (@Official_Ganesh) May 13, 2022
ಓದಿ...
ನ್ಯೂಯಾರ್ಕ್ನಲ್ಲಿರುವ ಪ್ರಿಯಾಂಕಾ ರೆಸ್ಟೋರೆಂಟ್ಗೆ ವಿಕ್ಕಿ– ಕತ್ರಿನಾ ಭೇಟಿ
ಬಾಲಿವುಡ್ಗೆ ನನ್ನನ್ನು ಭರಿಸಲಾಗದು: ಮಹೇಶ್ ಬಾಬು ಹೇಳಿಕೆಗೆ ಕಂಗನಾ ಪ್ರತಿಕ್ರಿಯೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.