ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರೀಕರಣ ಸ್ಥಳ ನೋಡಲು ಲಡಾಖ್‌ಗೆ ಹೋಗಿದ್ದಾಗ ಅನಾರೋಗ್ಯ: ಕನ್ನಡದ ನಟ ಧನುಷ್ ನಿಧನ

Last Updated 19 ಜನವರಿ 2023, 13:31 IST
ಅಕ್ಷರ ಗಾತ್ರ

ಬೆಂಗಳೂರು: ಚಂದನವನದ ನಟ ಧನುಷ್‌(40) ಅನಾರೋಗ್ಯದಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ.

ಮುತ್ತುರಾಜ್‌ ಇವರ ಮೂಲ ಹೆಸರು. ‘ಪ್ಯಾರ್ ಕಾ ಗೋಲ್‌ಗುಂಬಜ್‌’, ‘ಕೊಟ್ಲಲ್ಲಪ್ಪೋ ಕೈ’ ‘ಸಂಪಿಗೆ ಹಳ್ಳಿ’, ನಟ ಶಿವರಾಜ್‌ಕುಮಾರ್‌ ಅವರ ‘ಲೀಡರ್’ ಸಿನಿಮಾ, ‘ಸ್ನೇಹಿತ’ ಸಿನಿಮಾ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಇವರು ನಟಿಸಿದ್ದರು. ಕಳೆದ 15 ವರ್ಷದಿಂದ ಧನುಷ್‌ ಚಿತ್ರರಂಗದಲ್ಲಿದ್ದರು.

ತಮ್ಮ ಮುಂದಿನ ಪ್ರಾಜೆಕ್ಟ್‌ನ ಚಿತ್ರೀಕರಣಕ್ಕಾಗಿ ಸ್ಥಳ ಹುಡುಕಲು ಇತ್ತೀಚೆಗೆ ಅವರು ಲಡಾಖ್‌ಗೆ ತೆರಳಿದ್ದರು. ಈ ವೇಳೆ ಅಲ್ಲಿನ ವಾತಾವರಣದಿಂದಾಗಿ ಧನುಷ್‌ ಆರೋಗ್ಯ ಸಮಸ್ಯೆ ಎದುರಿಸಿದ್ದರು. ಅವರನ್ನು ವಾರದ ಹಿಂದೆ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ರಾತ್ರಿ 10:45ಕ್ಕೆ ಅವರು ನಿಧನರಾಗಿದ್ದಾರೆ. ಗುರುವಾರ ರಾತ್ರಿ ಬಾಗಲಕೋಟೆ ಜಿಲ್ಲೆಯ ಕೋಡಿಹಾಳ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT