ಗುರುವಾರ , ಆಗಸ್ಟ್ 13, 2020
21 °C
ನಟಿ ಮತ್ತು ಕುಟುಂಬ ಸದಸ್ಯರು ಸುರಕ್ಷಿತ

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಕಾರು ಚಾಲಕನಿಗೆ ಕೊರೊನಾ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟಿ ಸಾರಾ ಅಲಿ ಖಾನ್‌ ಅವರ ಕಾರು ಚಾಲಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸಾರಾ ಮತ್ತು ಅವರ ಕುಟುಂಬ ಸದಸ್ಯರು ಕೋವಿಡ್‌–19 ಪರೀಕ್ಷೆ ಮಾಡಿಸಿಕೊಂಡಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ. ಖುದ್ದು ನಟಿಯೇ ಸೋಮವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. 

ಸೋಂಕು ದೃಢಪಡುತ್ತಲೇ ಬೃಹತ್‌ ಮುಂಬೈ ಮಹಾನಗರ ಪಾಲಿಕೆಯ(ಬಿಎಂಸಿ) ಅಧಿಕಾರಿಗಳು ಕಾರು ಚಾಲಕನನ್ನು ಸಾಂಸ್ಥಿಕ ಕ್ವಾರಂಟೈನ್‌ ಸೆಂಟರ್‌ಗೆ ಸೇರಿಸಿದ್ದಾರೆ. ತಕ್ಷಣ ಈ ವಿಷಯವನ್ನು ಸಾರಾ ಗಮನಕ್ಕೆ ತಂದಿದ್ದ ಅಧಿಕಾರಿಗಳು,ಕೋವಿಡ್‌–19 ಪರೀಕ್ಷೆ ಮಾಡಿಸಿಕೊಳ್ಳುವಂತೆಯೂ ಸಲಹೆ ನೀಡಿದ್ದರು.

ಸಾರಾ, ಆಕೆಯ ಅಮ್ಮ ಅಮೃತಾ ಸಿಂಗ್‌, ಸಹೋದರ ಇಬ್ರಾಹಿಂ ಅಲಿ ಖಾನ್‌ ಮತ್ತು ಸಹಾಯಕ ಸಿಬ್ಬಂದಿಯು ಕೋವಿಡ್‌–19 ಪರೀಕ್ಷೆಗೆ ಒಳಗಾಗಿದ್ದರು. ಸಮಾಧಾನದ ವಿಷಯವೆಂದರೆ ಎಲ್ಲರ ವರದಿಯೂ ನೆಗೆಟಿವ್‌ ಬಂದಿದೆ.  

‘ಕೋವಿಡ್‌–19 ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಕಾಲಕ್ಕೆ ಎಚ್ಚರಿಸಿದ ಮುಂಬೈ ಪಾಲಿಕೆಯ ಸಿಬ್ಬಂದಿಗೆ ತುಂಬು ಹೃದಯದ ಕೃತಜ್ಞತೆ. ಮನೆಯಲ್ಲಿ ಎಲ್ಲ ರೀತಿಯ ಸುರಕ್ಷಿತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಎಲ್ಲರೂ ಸುರಕ್ಷಿತವಾಗಿರಿ’ ಎಂದು ಸಾರಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

 
 
 
 

 
 
 
 
 
 
 
 
 

🙏🏻🙏🏻🙏🏻

A post shared by Sara Ali Khan (@saraalikhan95) on

ಲಾಕ್‌ಡೌನ್‌ನಲ್ಲಿ ಮನೆಯಲ್ಲಿಯೇ ಇದ್ದು ಬೇಸತ್ತಿದ್ದ ಅಮ್ಮನನ್ನು ಇತ್ತೀಚೆಗೆ ಹೊರಗೆ ತಿರುಗಾಡಲು ಕರೆದೊಯ್ದಿದ್ದ ನಟಿ, ‘ಮಮ್ಮೀಸ್‌ ಡೇ ಔಟ್‌’ ಶೀರ್ಷಿಕೆಯಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದರು. ಸಹೋದರನ ಜತೆ  ಸೈಕಲ್‌ನಲ್ಲಿ ನಿರ್ಮಾಪಕರನ್ನು ಭೇಟಿಯಾಗಲು ಅವರ ಮನೆಗೆ ತೆರಳಿದ್ದ ಫೋಟೊಗಳನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು