ಸೋಮವಾರ, ಜನವರಿ 25, 2021
19 °C

ಚಿತ್ರೀಕರಣ ಮುಗಿಸಿದ ‘ಸಾವಿತ್ರಿ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ ತಾರಾ ಅವರು ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ‘ಸಾವಿತ್ರಿ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

ಪಿ.ಎನ್.ಪಿ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರಶಾಂತ್ ಕುಮಾರ್ ಹೀಳಲಿಗೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರಶಾಂತ್ ಕುಮಾರ್ ಅವರು ಮೂಲತಃ ಸಾಫ್ಟ್‌ವೇರ್ ಉದ್ಯೋಗಿ. ಎಸ್.ದಿನೇಶ್ ಅವರ ಕಥೆ, ಚಿತ್ರಕಥೆ, ನಿರ್ದೇಶನ‌ವಿದೆ. ‘ಉಯ್ಯಾಲೆ’ ನಂತರ ಇದು ದಿನೇಶ್‌ ನಿರ್ದೇಶನದ ಎರಡನೇ ಚಿತ್ರ.

ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರು ನಾಯಕ. ಊರ್ವಶಿ ರೈ ನಾಯಕಿ. ಪ್ರಕಾಶ್ ಬೆಳವಾಡಿ, ಸಂಜು ಬಸಯ್ಯ(ಕಾಮಿಡಿ ಕಿಲಾಡಿಗಳು),‌ ಬೇಬಿ ನೈಲಾ ಪ್ರಮೋದ್, ಸ್ವಾತಿ, ಮಾ.ಪುನೀತ್, ಮಾ.ಮಾನ್ವಿಕ್, ಮಾ.ಚಿನ್ಮಯ್, ಬೇಬಿ ಸಂಜನಾ ಹೃದಯಶಿವ ತಾರಾಗಣದಲ್ಲಿದ್ದಾರೆ.

ಸಾಹಿತಿ ಹೃದಯ ಶಿವ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಗೀತರಚನೆ ಹಾಗೂ ಸಂಭಾಷಣೆ ಕೂಡ ಅವರದ್ದೆ. ಗೀತರಚನೆಕಾರರಾಗಿದ್ದ ಹೃದಯ ಶಿವ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿದ್ದಾರೆ. ನಾಗಾರ್ಜುನ ಡಿ. ಛಾಯಾಗ್ರಹಣ ಹಾಗೂ ಮನು ಅವರ ಸಂಕಲನ ಈ ಚಿತ್ರಕ್ಕಿದೆ. ಕೌಟುಂಬಿಕ ಹಾಗೂ ಹಾರಾರ್ ಕಥಾಹಂದರ ಚಿತ್ರದಲ್ಲಿದೆ. ನಾಯಕರಾಗಿ ವಿಜಯ ರಾಘವೇಂದ್ರ ಅಭಿನಯಿಸಿದ್ದಾರೆ. ಊರ್ವಶಿ ರೈ  ನಾಯಕಿ. 45 ಕ್ಕೂ ಹೆಚ್ಚು ದಿನಗಳ ಕಾಲ‌ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸದ್ಯ ಸಂಕಲನ ನಡೆಯುತ್ತಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು