ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟೈಮ್‌’ ಪ್ರಭಾವಿಗಳ ಪಟ್ಟಿಯಲ್ಲಿ ಶಾರುಕ್‌ ಖಾನ್‌, ರಾಜಮೌಳಿ

Last Updated 13 ಏಪ್ರಿಲ್ 2023, 16:18 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಟೈಮ್‌ ನಿಯತಕಾಲಿಕ ಸಿದ್ಧಪಡಿಸಿರುವ 2023ರ ಜಾಗತಿಕ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಬಾಲಿವುಡ್‌ ನಟ ಶಾರುಕ್‌ ಖಾನ್‌, ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್‌. ರಾಜಮೌಳಿ, ಲೇಖಕ ಸಲ್ಮಾನ್‌ ರಶ್ದಿ, ಕಿರುತೆರೆ ನಿರೂಪಕಿ ಹಾಗೂ ತೀರ್ಪುಗಾರ್ತಿ ಪದ್ಮಾ ಲಕ್ಷ್ಮಿ ಅವರ ಹೆಸರು ಇದೆ.

ವಿಶ್ವದ 100 ಪ್ರಭಾವಿಗಳ ಪಟ್ಟಿಯನ್ನು ಗುರುವಾರ ಟೈಮ್‌ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಅಮೆರಿಕದ ಅಧ್ಯಕ್ಷ ಜೋ ಬಿಡೆನ್‌, ಬ್ರಿಟನ್‌ ರಾಜ ಕಿಂಗ್‌ ಚಾರ್ಲ್ಸ್‌, ಟ್ವಿಟರ್ ಸಿಇಒ ಇಲಾನ್‌ ಮಸ್ಕ್‌, ಸಿರಿಯಾ ಮೂಲದ ಈಜುಗಾರ್ತಿಯರಾದ ಸಾರಾ ಮಾರ್ಡಿನಿ ಮತ್ತು ಇಸ್ರಾ ಮಾರ್ಡಿನಿ, ಗಾಯಕ ಬೆಯಾನ್ಸ್‌ ಅವರ ಹೆಸರು ಪಟ್ಟಿಯಲ್ಲಿದೆ.

‘ಭಾರತ ಭೌಗೋಳಿಕ ಭಿನ್ನತೆಯಿಂದ ಕೂಡಿದೆ. ಜನರ ಅಭಿರುಚಿ ಮತ್ತು ಸಂಸ್ಕೃತಿಯೂ ಭಿನ್ನವಾಗಿದೆ. ರಾಜಮೌಳಿ ಅವರ ಸಿನಿಮಾಗಳಲ್ಲಿ ಈ ಅಂಶಗಳು ದಟ್ಟವಾಗಿ ಮೇಳೈಸಿವೆ’ ಎಂದು ಬಾಲಿವುಡ್‌ ನಟಿ ಅಲಿಯಾ ಭಟ್‌ ಅವರು, ರಾಜಮೌಳಿ ಅವರ ಕುರಿತ ಕಿರು ಪರಿಚಯದಲ್ಲಿ ಬರೆದಿದ್ದಾರೆ.

ಶಾರುಕ್‌ ಖಾನ್‌ ಅವರ ಪರಿಚಯವನ್ನು ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಬರೆದಿದ್ದು, ‘ಅವರು ಎಲ್ಲಾ ಕಾಲಕ್ಕೂ ಸಲ್ಲುವ ನಟ’ ಎಂದು ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT