ಮುಂಬೈ: ಕಳೆದ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿ ಮಾಡಿದ ಟಾಪ್ 10 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಶಾರುಕ್ ಖಾನ್ ಮೊದಲ ಸ್ಥಾನದಲ್ಲಿದ್ದಾರೆ ಎಂದು ಗೊತ್ತಾಗಿದೆ.
ಫಾರ್ಚೂನ್ ಇಂಡಿಯಾ ವರದಿ ಪ್ರಕಾರ, ಶಾರುಕ್ ಖಾನ್ ಬರೋಬ್ಬರಿ ₹92 ಕೋಟಿ ತೆರಿಗೆ ಪಾವತಿ ಮಾಡುವ ಮೂಲಕ ಮೊದಲನೇ ಸ್ಥಾನದಲ್ಲಿದ್ದಾರೆ. ತಮಿಳು ನಟ ವಿಜಯ್ ₹80 ಕೋಟಿ ತೆರಿಗೆ ಪಾವತಿಸಿ ಎರಡನೇ ಸ್ಥಾನದಲ್ಲಿದ್ದರೆ, ಬಾಲಿವುಡ್ ನಟ ಸಲ್ಮಾನ್ ಖಾನ್ ₹75 ಕೋಟಿ ಆದಾಯ ತೆರಿಗೆ ಪಾವತಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.
ಇನ್ನು, ಹಿರಿಯ ನಟ ಅಮಿತಾಬ್ ಬಚ್ಚನ್ ₹71 ಕೋಟಿ, ಕ್ರಿಕೆಟಿಗ ವಿರಾಟ್ ಕೊಹ್ಲಿ ₹66 ಕೋಟಿ, ನಟ ಅಜಯ್ ದೇವಗನ್ ₹42 ಕೋಟಿ, ಎಂ.ಎಸ್. ಧೋನಿ ₹38 ಕೋಟಿ ತೆರಿಗೆ ಪಾವತಿಸಿ ಏಳನೇ ಸ್ಥಾನದಲ್ಲಿದ್ದಾರೆ.
ಇವರಲ್ಲದೆ ರಣಬೀರ್ ಕಪೂರ್ ₹36 ಕೋಟಿ, ಹೃತಿಕ್ ರೋಷನ್ ಮತ್ತು ಸಚಿನ್ ತೆಂಡೂಲ್ಕರ್ ತಲಾ ₹28 ಕೋಟಿ ತೆರಿಗೆ ಪಾವತಿಸಿದ್ದಾರೆ.
ಇನ್ನು, ಟಾಪ್ 20ರ ಪಟ್ಟಿಯಲ್ಲಿ ಕಪಿಲ್ ಶರ್ಮಾ (₹26 ಕೋಟಿ), ಸೌರವ್ ಗಂಗೂಲಿ (₹23 ಕೋಟಿ), ಕರೀನಾ ಕಪೂರ್(₹20 ಕೋಟಿ). ಶಾಹೀದ್ ಕಪೂರ್ (₹14 ಕೋಟಿ), ಹಾರ್ದಿಕ್ ಪಾಂಡ್ಯ (₹13 ಕೋಟಿ), ಕಿಯಾರಾ ಅಡ್ವಾಣಿ (₹12 ಕೋಟಿ), ಮೋಹನ್‌ಲಾಲ್ ಮತ್ತು ಅಲ್ಲು ಅರ್ಜುನ್ ₹14 ಕೋಟಿ ಹಾಗೂ ಕತ್ರೀನಾ ಕೈಫ್ ಮತ್ತು ಪಂಕಜ್ ತ್ರಿಪಾಠಿ ತಲಾ ₹11 ಕೋಟಿ ತೆರಿಗೆ ಪಾವತಿಸಿದ್ದಾರೆ.