ಸೋಮವಾರ, ಡಿಸೆಂಬರ್ 9, 2019
17 °C

‘ಜೆರ್ಸಿ’ ರಿಮೇಕ್‌ನಲ್ಲಿ ಶಾಹಿದ್‌– ಶ್ರದ್ಧಾ

Published:
Updated:
Prajavani

ತೆಲುಗಿನ ‘ಜೆರ್ಸಿ’ ಸಿನಿಮಾ ಹಿಂದಿಗೆ ರಿಮೇಕ್‌ ಆಗುತ್ತಿದ್ದು, ಇದರಲ್ಲಿ ನಟ ಶಾಹಿದ್‌ ಕಪೂರ್‌ ಹಾಗೂ ಶ್ರದ್ಧಾ ಕಪೂರ್‌ ಜೋಡಿಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಕೇಳಿಬರುತ್ತಿದೆ.

ನಾನಿ ಹಾಗೂ ಶ್ರದ್ಧಾ ಶ್ರೀನಾಥ್‌ ಅಭಿನಯದ ಈ ತೆಲುಗು ಚಿತ್ರವು ಹಿಂದಿಗೆ ರಿಮೇಕ್‌ ಆಗುತ್ತಿದೆ ಎಂದಾಗ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.  ಚಿತ್ರದಲ್ಲಿ ನಟಿಸಲು ಶಾಹಿದ್‌ ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ.  ಚಿತ್ರವನ್ನು ಗೌತಮ್‌ ತಿನ್ನನೂರಿ ನಿರ್ದೇಶನ ಮಾಡುತ್ತಿದ್ದಾರೆ.

ಈ ಚಿತ್ರಕ್ಕೆ ನಾಯಕಿ ಪಾತ್ರಕ್ಕೆ ನಟಿ ರಶ್ಮಿಕಾ ಮಂದಣ್ಣ ಹೆಸರು ಕೇಳಿಬಂದಿತ್ತು. ಈಗ ‘ಸಾಹೋ’ ಚಿತ್ರದ ನಾಯಕಿ ಶ್ರದ್ಧಾ ಕಪೂರ್‌ ಹೆಸರು ಕೇಳಿಬರುತ್ತಿದೆ. ಮೂಲ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್‌ ನಟನೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು.

ಆ ಪಾತ್ರ ಹಾಗೂ ಶಾಹಿದ್‌ ನಟನೆಯ ರಿಮೇಕ್‌ ‘ಕಬೀರ್‌ ಸಿಂಗ್‌’ ಚಿತ್ರದ ಯಶಸ್ಸನ್ನು ಗಮನಿಸಿ, ಶ್ರದ್ಧಾ ಕಪೂರ್‌ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಳ್ಳಲಿದ್ದಾರೆ ಎಂಬ ಯೋಚನೆ ಚಿತ್ರತಂಡದ್ದು.  ಶ್ರದ್ಧಾ ಶ್ರೀನಾಥ್‌ನಂತೆಯೇ ಶ್ರದ್ಧಾ ಕಪೂರ್‌ ಸಹ ಪಾತ್ರಕ್ಕೆ ಜೀವ ತುಂಬಿ ನಟಿಸಲಿದ್ದಾರೆ ಎಂಬ ಮಾತು ಬಾಲಿವುಡ್‌ನಲ್ಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು