ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಟಿಟಿಯಲಿ ‘ಶಕುಂತಲಾ ದೇವಿ’ ಬಯೋಪಿಕ್ ಬಿಡುಗಡೆ

Last Updated 15 ಮೇ 2020, 10:07 IST
ಅಕ್ಷರ ಗಾತ್ರ

ಕೊರೊನಾ ಲಾಕ್‌ಡೌನ್‌ ಪರಿಣಾಮ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಯಾವಾಗ ತೆರೆಯುತ್ತವೆ ಎಂಬುದು ಅವುಗಳ ಮಾಲೀಕರಿಗೂ ತಿಳಿದಿಲ್ಲ. ಮತ್ತೊಂದೆಡೆ ಸಾಲ ಮಾಡಿ ಸಿನಿಮಾಗಳಿಗೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿರುವ ನಿರ್ಮಾಪಕರ ಗೋಳು ಹೇಳತೀರದು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಒಟಿಟಿ ವೇದಿಕೆಗಳು ಅವರ ಪಾಲಿಗೆ ವರದಾನವಾಗಿ ಕಂಡಿದ್ದರೆ ಅಚ್ಚರಿಪಡಬೇಕಿಲ್ಲ.

ಪ್ರಸ್ತುತ ಹಿಂದಿ, ಕನ್ನಡ ಸೇರಿದಂತೆ ವಿವಿಧ ಭಾಷೆಯ ಹಲವು ಸಿನಿಮಾಗಳು ಒಟಿಟಿ ಮೂಲಕ ತೆರೆಕಾಣಲು ಸರದಿ ಸಾಲಿನಲ್ಲಿ ನಿಂತಿರುವುದು ಗುಟ್ಟೇನಲ್ಲ. ಇದು ಒಟಿಟಿ ವೇದಿಕೆಗಳು ಮತ್ತು ಚಿತ್ರಮಂದಿರದ ಮಾಲೀಕರ ನಡುವೆ ಸಂಘರ್ಷಕ್ಕೂ ನಾಂದಿ ಹಾಡಿದೆ.

ಅಮಿತಾಭ್‌ ಬಚ್ಚನ್‌ ಮತ್ತು ಆಯುಷ್ಮಾನ್‌ ಖುರಾನಾ ನಟನೆಯ ಹಿಂದಿ ಸಿನಿಮಾ ‘ಗುಲಾಬೊ ಸಿತಾಬೊ’ ಜೂನ್‌ 12ರಂದು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಇದನ್ನು ಸೂಜಿತ್ ಸಿರ್ಕಾರ್ ನಿರ್ದೇಶಿಸಿದ್ದಾರೆ. 2012ರಲ್ಲಿ ತೆರೆಕಂಡ ಆಯುಷ್ಮಾನ್ ನಟನೆಯ ‘ವಿಕಿ ಡೋನರ್’ ಹಾಗೂ 2015ರಲ್ಲಿ ಅಮಿತಾಭ್ ನಟನೆಯ ‘ಪೀಕು’ ಸಿನಿಮಾಕ್ಕೂ ಅವರೇ ಆ್ಯಕ್ಷನ್‌ ಕಟ್‌ ಹೇಳಿದ್ದರು.

‘ಗುಲಾಬೊ ಸಿತಾಬೊ’ ಒಟಿಟಿ ವೇದಿಕೆ ಪ್ರವೇಶಿಸಿದ ಬೆನ್ನಲ್ಲೇ ಅನು ಮೆನನ್‌ ನಿರ್ದೇಶನದ ‘ಶಕುಂತಲಾ ದೇವಿ’ ಚಿತ್ರವೂ ಅಮೆಜಾನ್‌ ಪ್ರೇಮ್‌ನಲ್ಲಿ ಬಿಡುಗಡೆಯಾಗುವುದು ಖಾತ್ರಿಯಾಗಿದೆ. ಇನ್ನೂ ಇದರ ಬಿಡುಗಡೆಯ ದಿನಾಂಕ ನಿಗದಿಯಾಗಿಲ್ಲ. ಆದರೆ, ಜೂನ್‌ ತಿಂಗಳಿನಲ್ಲಿಯೇ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.

ಗಣಿತಜ್ಞೆ ಶಕುಂತಲಾ ದೇವಿ ಅವರ ಬಯೋಪಿಕ್‌ ಇದಾಗಿದೆ. ಪರದೆ ಮೇಲೆ ಶಕುಂತಲಾ ದೇವಿಯ ಪಾತ್ರಕ್ಕೆ ಜೀವ ತುಂಬಿರುವುದು ಬಾಲಿವುಡ್‌ ನಟಿ ವಿದ್ಯಾ ಬಾಲನ್‌. ಅಂದಹಾಗೆ ಇದೇ ತಿಂಗಳ 8ರಂದು ಈ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಕೊರೊನಾ ಭೀತಿಯ ಪರಿಣಾಮ ಬಿಡುಗಡೆಯ ದಿನಾಂಕ ಮುಂದೂಡಿಕೆಯಾಗಿತ್ತು.

‘ಶಕುಂತಲಾ ದೇವಿ ಮಾನವ ಕಂಪ್ಯೂಟರ್‌ ಎಂದೇ ಪ್ರಸಿದ್ಧರಾಗಿದ್ದಾರೆ. ಅವರ ಗಣಿತದ ಜ್ಞಾನಕ್ಕೆ ಸರಿಸಾಟಿಯಾಗುವವರು ವಿರಳ. ಅವರ ಅಪರೂಪದ ಬದುಕಿನ ಪಯಣವನ್ನು ಅಮೆಜಾನ್‌ ಪ್ರೇಮ್‌ನಲ್ಲಿ ಕಣ್ತುಂಬಿಕೊಳ್ಳಲು ನಾನೂ ಕಾತರದಿಂದ ಕಾಯುತ್ತಿರುವೆ’ ಎಂದು ಅನು ಮೆನನ್‌ ಹೇಳಿದ್ದಾರೆ.

ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ಸ್‌ ಮತ್ತು ವಿಕ್ರಮ್‌ ಮಲ್ಹೋತ್ರ ಇದಕ್ಕೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT