ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಶಿಲಲಿತಾ ಬಯೋಪಿಕ್‌ಗೆ ಕಾಜೋಲ್, ಅಮಲಾಪೌಲ್

ಜಯಲಲಿತಾ ಈಗ ಚಿತ್ರಗಳಿಗೆ ಕಥಾವಸ್ತು
Last Updated 23 ಸೆಪ್ಟೆಂಬರ್ 2019, 9:57 IST
ಅಕ್ಷರ ಗಾತ್ರ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಹಲವು ನಿರ್ದೇಶಕರಿಗೆ ಈಗ ಚಿತ್ರ ಕಥಾವಸ್ತು.

ಅಪ್ರತಿಮ ಸೌಂದರ್ಯದಿಂದ ತಮಿಳು ಸಿನಿಮಾರಂಗ ಬೆಳಗಿ, ಆ ಮೂಲಕವೇ ರಾಜಕೀಯ ಪ್ರವೇಶಿಸಿ ಮುಖ್ಯಮಂತ್ರಿಯಾದ ಜಯಲಲಿತಾ ಅವರ ಜೀವನ ಚರಿತ್ರೆ ಯಾವ ಸಿನಿಮಾಕ್ಕಿಂತಲೂ ಕಮ್ಮಿ ಇಲ್ಲ. ಹಾಗಂತಲೇ ಜಯಲಲಿತಾ ಕುರಿತು ಸಾಲುಸಾಲು ಜೀವನಚರಿತ್ರೆಯಾಧಾರಿತ ಚಿತ್ರಗಳು ಸೆಟ್ಟೇರುತ್ತಿರುವುದು ಸೋಜಿಗವೇನಲ್ಲ.

ತೆಲುಗಿನ ಖ್ಯಾತ ನಿರ್ದೇಶಕ ಕೆಥಿರೆಡ್ಡಿ ಜಗದೀಶ್ವರ ರೆಡ್ಡಿ ಇದೀಗ ಜಯಲಲಿತಾ ಮತ್ತು ಅವರ ಆಪ್ತ ಗೆಳತಿ ಶಶಿಕಲಾ ಜೀವನಾಧಾರಿತ ಚಿತ್ರ ನಿರ್ದೇಶಿಸಲು ಮುಂದಾಗಿದ್ದು, ಮುಖ್ಯಪಾತ್ರಗಳಿಗೆ ಬಾಲಿವುಡ್‌ನ ಕೃಷ್ಣಸುಂದರಿ ಕಾಜೋಲ್ ಮತ್ತು ತೆಲುಗು–ತಮಿಳಿನ ಜನಪ್ರಿಯ ನಟಿ ಅಮಲಾಪೌಲ್ ಅವರ ಕಾಲ್‌ಶೀಟ್ ಕೇಳಿದ್ದಾರಂತೆ.

‘ಶಶಿಲಲಿತಾ’ ಹೆಸರಿನಲ್ಲಿ ತಯಾರಾಗುತ್ತಿರುವ ಈ ಚಿತ್ರದ ಕಥೆಯನ್ನು ಕಾಜೋಲ್ ಮತ್ತು ಅಮಲಾ ಅವರಿಗೆ ನಿರ್ದೇಶಕರು ಈಗಾಗಲೇ ತಲುಪಿಸಿದ್ದಾರೆ. ಇಬ್ಬರೂ ಇನ್ನೂ ಒಪ್ಪಿಗೆ ನೀಡಬೇಕಿದೆಯಷ್ಟೇ. ರೆಡ್ಡಿ ಆದ್ಯತೆಯ ಮೇರೆಗೆ ಕಾಜೋಲ್ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ. ಈಚೆಗಷ್ಟೇ ನಿಧನರಾದ ಕಾಜೋಲ್ ಅವರ ಮಾವ ವೀರು ದೇವಗನ್, ರೆಡ್ಡಿ ಅವರ ಜೊತೆಗೆ ಪದ್ಮಾಲಯ ಸ್ಟುಡಿಯೊದಲ್ಲಿ ಅನೇಕ ಚಿತ್ರಗಳಿಗೆ ಕೆಲಸ ಮಾಡಿದವರು. ಆ ನಂಟಿನ ಕಾರಣಕ್ಕಾಗಿ ರೆಡ್ಡಿ ಅವರಿಗೆ ಕಾಜೋಲ್ ಒಪ್ಪಿಗೆ ಮುಖ್ಯವಾಗಿದೆ.

ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಹೀಗೆ ನಾಲ್ಕು ಭಾಷೆಗಳಲ್ಲಿ ಸಿನಿಮಾ ನಿರ್ದೇಶಿಸಬೇಕೆಂಬ ಆಸೆ ಇಟ್ಟುಕೊಂಡಿದ್ದಾರಂತೆ ಜಗದೀಶ್ವರ ರೆಡ್ಡಿ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ರೆಡ್ಡಿ ಅವರ ಮಹತ್ವಾಕಾಂಕ್ಷೆಯ ಈ ಚಿತ್ರ ಆಗಸ್ಟ್‌ನಲ್ಲಿ ಶೂಟಿಂಗ್ ಆರಂಭಿಸಲಿದೆ. ಸದ್ಯಕ್ಕೆ ಚಿತ್ರತಂಡ ಜಯಲಲಿತಾ ಆಪ್ತ ಗೆಳತಿ ಶಶಿಕಲಾ ಕುರಿತಂತೆ ಮಾಹಿತಿ ಕಲೆಹಾಕುವುದರಲ್ಲಿ ನಿರತವಾಗಿದೆ.

ಜಯಲಲಿತಾ ಜೀವನಚರಿತ್ರೆ ಆಧರಿಸಿ ‘ತಲೈವಿ’ ಹೆಸರಿನಲ್ಲಿಚಿತ್ರ ತಯಾರಾಗುತ್ತಿದ್ದು, ಇದರಲ್ಲಿ ನಟಿ ಕಂಗನಾ ರೌನತ್ ಜಯಲಲಿತಾ ಪಾತ್ರ ಮಾಡುತ್ತಿದ್ದಾರೆ. ಚಿತ್ರವನ್ನು ವಿಜಯ್ ನಿರ್ದೇಶಿಸುತ್ತಿದ್ದಾರೆ. ‘ಐರನ್ ಲೇಡಿ’ ಹೆಸರಿನ ಚಿತ್ರದಲ್ಲಿ ನಿತ್ಯಾ ಮೆನನ್ ಜಯಲಲಿತಾ
ಪಾತ್ರ ಮಾಡುತ್ತಿದ್ದು, ಇದನ್ನು ಎ. ಪ್ರಿಯದರ್ಶಿನಿ ನಿರ್ದೇಶಿಸುತ್ತಿದ್ದಾರೆ. ಇನ್ನು ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಜಯಲಲಿತಾ ಜೀವನಾಧಾರಿತ ವೆಬ್ ಸರಣಿ ನಿರ್ದೇಶಿಸುತ್ತಿದ್ದು, ಇದರಲ್ಲಿ ರಮ್ಯಾ ಕೃಷ್ಣ ಜಯಲಲಿತಾ ಪಾತ್ರ ಮಾಡುತ್ತಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT