ಮಂಗಳವಾರ, ಸೆಪ್ಟೆಂಬರ್ 28, 2021
20 °C

ಎರಡನೇ ಮದುವೆ ಸಮರ್ಥಿಸಿಕೊಂಡ ನಟಿ ಶೆಫಾಲಿ ಜರಿವಾಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡದ ಹುಡುಗರು ಸಿನಿಮಾದಲ್ಲಿ ‘ಪಂಕಜಾ’ ಹಾಡಿಗೆ ಹೆಜ್ಜೆ ಹಾಕಿದ್ದ ಬಾಲಿವುಡ್‌ ಬೆಡಗಿ ಶೆಫಾಲಿ ಜರಿವಾಲಾ ತಮ್ಮ ಮದುವೆಯ ಬಗ್ಗೆ ಮಾತನಾಡುವ ಮೂಲಕ ಸುದ್ದಿಯಾಗಿದ್ದಾರೆ.

ಸದ್ಯ ಬಾಲಿವುಡ್‌, ಕಿರುತೆರೆ ಸೇರಿದಂತೆ ಆಲ್ಬಂ ಸಾಂಗ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಶೆಫಾಲಿ ಎರಡನೇ ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. 2014ರಲ್ಲಿ ಆದ ಎರಡನೇ ಮದುವೆಯನ್ನು ಈಗ ಸಮರ್ಥಿಸಿಕೊಂಡಿದ್ದಾರೆ.

ಇತ್ತೀಚೆಗೆ ಸಿನಿಮಾ ಸುದ್ದಿಗಳ ವೆಬ್‌ತಾಣ ‘ಬಾಲಿವುಡ್‌ ಬಬ್ಬಲ್‌’ಗೆ ಶೆಫಾಲಿ ನೀಡಿದ ಸಂದರ್ಶನದಲ್ಲಿ ತಮ್ಮ ಮದುವೆ, ಸಮಾಜ ಹಾಗೂ ಗಂಡಸರ ಬಗ್ಗೆ ಮಾತನಾಡಿದ್ದಾರೆ.

2004ರಲ್ಲಿ ನಾನು ಹರ್ಮಿತ್‌ ಸಿಂಗ್‌ ಅವರನ್ನು ಮದುವೆಯಾದೇ, ಅವರ ಜೊತೆ ಹೊಂದಾಣಿಕೆ  ಸಾಧ್ಯವಾಗದಕ್ಕೆ 2009ರಲ್ಲಿ ವಿಚ್ಚೇದನ ಪಡೆದುಕೊಂಡೆ. ಆಗ ಜನರು ನನ್ನದೇ ತಪ್ಪು ಇರಬೇಕು ಎಂದು ಮಾತನಾಡಿದರು. ಇವಳು ಸಿನಿಮಾದಲ್ಲಿ ಹಸಿಬಿಸಿಯಾಗಿ ನಟಿಸುತ್ತಾಳೆ, ಇವಳದೇ ತಪ್ಪು ಇರಬೇಕು ಎಂದು ನನ್ನ ಬಗ್ಗೆಯೇ ಬೊಟ್ಟು ಮಾಡಿ ತೋರಿಸಿದರು ಎಂದು ಶೆಫಾಲಿ ಹೇಳಿದ್ದಾರೆ.

2014ರಲ್ಲಿ ಪರಾಗ್‌ ತ್ಯಾಗಿಯವರನ್ನು ಮದುವೆಯಾದಗಲೂ ಜನರು ನನ್ನ ಬಗ್ಗೆ ಕೊಂಕು ಮಾತುಗಳನ್ನು ಆಡಿದರು. ಈ ವೇಳೆ ನನ್ನ ಕುಟುಂಬ ಮತ್ತು ಗೆಳೆಯರು ಬೆನ್ನಿಗೆ ನಿಂತು ಧೈರ್ಯ ತುಂಬಿದರು ಎಂದು ಶೆಫಾಲಿ ಹೇಳಿದ್ದಾರೆ.

ಗಂಡಸರು ಹತ್ತು ಮದುವೆಯಾಗಬಹುದು ಆದರೆ ಹೆಂಗಸರು ಎರಡನೇ ಮದುವೆಯಾದರೇ ಸಾಕು ಅವರನ್ನು ತುಚ್ಛವಾಗಿ ನೋಡಲಾಗುತ್ತದೆ. ಯಾಕೆ ಈ ರೀತಿ ಎಂದು ಶೆಫಾಲಿ ಸಮಾಜದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು