2018ರಲ್ಲಿ ತೆರೆಕಂಡಿದ್ದ ನಟ ಶಿವರಾಜ್ಕುಮಾರ್ ನಟನೆಯ ‘ಟಗರು’ ಸಿನಿಮಾದ ‘ಟಗರು ಬಂತು ಟಗರು’ ಹಾಡುಯೂಟ್ಯೂಬ್ನಲ್ಲಿ ಈಗಾಗಲೇ 9 ಕೋಟಿ ವ್ಯೂವ್ಸ್ ಪಡೆದು ಮುನ್ನುಗುತ್ತಿದೆ. ಈ ಹಾಡಿಗೆ ಧ್ವನಿಯಾಗಿದ್ದ ತಮಿಳಿನ ಖ್ಯಾತ ಜನಪದ ಗಾಯಕ ಅಂತೋನಿ ದಾಸನ್ ಇದೀಗ ‘ನುಗ್ಗಿ ಬಂತೋ ನಾಡ ಹುಲಿ’ ಎಂದಿದ್ದಾರೆ.

ನಟ ಶಿವರಾಜ್ಕುಮಾರ್ ನಟನೆಯ, ಎಸ್.ಡಿ. ವಿಜಯ್ ಮಿಲ್ಟನ್ ನಿರ್ದೇಶನದ 123ನೇ ಸಿನಿಮಾ ‘ಬೈರಾಗಿ’ಯ ಮೊದಲ ಲಿರಿಕಲ್ ಹಾಡನ್ನು ನಟ ‘ದುನಿಯಾ’ ವಿಜಯ್ ಬಿಡುಗಡೆ ಮಾಡಿದ್ದಾರೆ. ‘ನಕರನಖ ನಕರನಖ ನುಗ್ಗಿ ಬಂತೋ ನಾಡ ಹುಲಿ...’ ಹಾಡಿನಲ್ಲಿ ಶಿವರಾಜ್ಕುಮಾರ್ ಲುಕ್, ಡ್ಯಾನ್ಸ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ವಿ. ನಾಗೇಂದ್ರಪ್ರಸಾದ್ ಅವರ ಸಾಹಿತ್ಯದ ಹಾಡಿಗೆ ಜೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದು, ಶಿವರಾಜ್ಕುಮಾರ್ ಜೊತೆಗೆ ನಟಿ ಅನು ಪ್ರಭಾಕರ್ ಅವರು ಹೆಜ್ಜೆ ಹಾಕಿರುವುದು ವಿಶೇಷ.

‘ಟಗರು’ ಸಿನಿಮಾ ಯಶಸ್ಸಿನ ಬಳಿಕ ಶಿವರಾಜ್ಕುಮಾರ್ ಹಾಗೂ ನಟ ‘ಡಾಲಿ’ ಧನಂಜಯ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ‘ಬೈರಾಗಿ’ ಸಿನಿಮಾ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ. ಅಂಜಲಿ ಈ ಚಿತ್ರದ ನಾಯಕಿ. ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಹಿರಿಯ ನಟ ಶಶಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.