ಸಾಮಾನ್ಯವಾಗಿ ಸ್ಟಾರ್ ನಟರು ಜನಸಾಮಾನ್ಯರಿಂದ ಆದಷ್ಟೂ ಅಂತರ ಕಾಯ್ದುಕೊಳ್ಳಲು ಬಯಸುತ್ತಾರೆ. ಆದರೆ ಶಿವರಾಜ್ಕುಮಾರ್ ಇದಕ್ಕೆ ಪೂರ್ತಿ ವಿರುದ್ಧ. ಅಭಿಮಾನಿಗಳನ್ನು ಕಂಡರೆ ಅವರು ತಮ್ಮ ವರ್ಚಸ್ಸಿನ ಪ್ರಭೆಯನ್ನು ಮರೆಯುತ್ತಾರೆ. ಮೀರುತ್ತಾರೆ. ಇಂಥದ್ದೇ ಒಂದು ಘಟನೆಗೆ ‘ಗ್ರಾಮಾಯಣ’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ ಸಾಕ್ಷಿಯಾಯಿತು.

ಅದು ಬೆಂಗಳೂರಿನ ಕಲಾವಿದರ ಸಂಘ. ವೇದಿಕೆಯ ಮೇಲೆ ಶಿವಣ್ಣ ಇದ್ದರು. ವೇದಿಕೆಯ ಮುಂಭಾಗಕ್ಕೆ ಬಂದ ಮಹಿಳೆಯೊಬ್ಬರು ಅವರತ್ತ ನೋಡಿ ಏನೋ ಸನ್ನೆ ಮಾಡಿದರು. ಶಿವರಾಜ್ ಕುಮಾರ್ ಅಲ್ಲಿಂದಲೇ ‘ಏನು?’ ಎಂದು ಕೇಳಿದರು. ಮಹಿಳೆ ತುಸು ಸಂಕೋಚದಿಂದಲೇ ‘ಒಂದು ಸೆಲ್ಫಿ’ ಎಂದರು. ಮರುಕ್ಷಣವೇ ಶಿವಣ್ಣ ಆ ಮಹಿಳೆಯ ಎದುರು ಹಾಜರ್. ಆದರೆ ಎತ್ತರದ ವೇದಿಕೆಯ ಮೇಲಿದ್ದ ಅವರು ಕೆಳಗೆ ನಿಂತಿದ್ದ ಮಹಿಳೆಯ ಮೊಬೈಲ್ ಕ್ಯಾಮೆರಾ ಫ್ರೇಮಿನೊಳಗೆ ಬರುತ್ತಿರಲಿಲ್ಲ. ಕೊಂಚ ಬಾಗಿದರು, ಇನ್ನಷ್ಟು ತಗ್ಗಿದರು.. ಊಹೂಂ. ಶಿವಣ್ಣನ ಮುಖ ಮತ್ತು ಆ ಮಹಿಳೆಯ ಮುಖ ಒಂದೇ ಫ್ರೇಮಿಗೆ ಸಿಗುತ್ತಲೇ ಇರಲಿಲ್ಲ.

ಎಲ್ಲರೂ ನೋಡನೋಡುತ್ತಿದ್ದ ಹಾಗೆಯೇ ಶಿವಣ್ಣ ಬಾಗಿ, ಮಂಡಿಯೂರಿ ಹೆಚ್ಚೂ ಕಮ್ಮಿ ಮಲಗಿಯೇ ಬಿಟ್ಟರು. ಈಗ ಮಹಿಳೆಯ ಹಿಡಿದ ಕ್ಯಾಮೆರಾ ಫ್ರೇಮಿನೊಳಗೆ ಶಿವಣ್ಣನ ನಗುಮುಖ ಮೂಡಿತು. ಜನಪ್ರಿಯತೆಯ ಉತ್ತುಂಗದಲ್ಲಿರುವ ನಟನೊಬ್ಬ ತನಗೆ ಜನಪ್ರಿಯತೆ ತಂದುಕೊಟ್ಟ ಜನರ ಎದುರುವ ಬಾಗುವ, ಅವರ ಅಭಿಮಾನದ ಫ್ರೇಮಿಗೆ ಮಣಿಯುವ ಈ ಅಪೂರ್ವ ದೃಶ್ಯ ಮಹಿಳೆಯ ಮೊಬೈಲ್ನಷ್ಟೇ ಅಲ್ಲ, ಸುತ್ತ ನಿಂತಿದ್ದ ಹಲವು ಜನರ ಕ್ಯಾಮೆರಾದಲ್ಲೂ ಸೆರೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.