ಮಂಗಳವಾರ, ಜುಲೈ 27, 2021
26 °C

ಮುದ್ದಿನ ನಾಯಿಯೊಂದಿಗಿನ ಫೋಟೊ ಶೇರ್ ಮಾಡಿದ ಶ್ರದ್ಧಾ ಕಪೂರ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Shraddha Kapoor Instagram

ಬೆಂಗಳೂರು: ಇತ್ತೀಚೆಗೆ ಬಾಲಿವುಡ್ ನಟ ವರುಣ್ ಧವನ್ ಪುಟ್ಟ ಬೀಗಲ್ ತಳಿಯ ನಾಯಿಮರಿಯ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಅದರ ಬೆನ್ನಲ್ಲೇ ನಟಿ ಶ್ರದ್ಧಾ ಕಪೂರ್ ತಮ್ಮ ನಾಯಿಯ ಜತೆಗೆ ಪೋಸ್ ನೀಡಿರುವ ಫೋಟೊ ಪೋಸ್ಟ್ ಮಾಡಿದ್ದಾರೆ.

ಮುಂಬೈನ ಮನೆಯ ಕಿಟಿಕಿ ಬಳಿ ಕಾಣಿಸುವ ಸಮುದ್ರದ ಹಿನ್ನೆಲೆಯ ದೃಶ್ಯದೊಂದಿಗೆ ಶ್ರದ್ಧಾ ಈ ಫೋಟೊ ಪೋಸ್ಟ್ ಮಾಡಿದ್ದು, ಮಾನ್ಸೂನ್ ಸ್ನಗಲ್ಸ್ ಎಂಬ ಅಡಿಬರಹ ನೀಡಿದ್ದಾರೆ.

ಶ್ರದ್ಧಾ ಫೋಟೊಗೆ ಆಕೆಯ ಸಹೋದರ ಸಿದ್ಧಾಂತ್ ಕಪೂರ್ ಕೂಡ ಕಮೆಂಟ್ ಮಾಡಿದ್ದು, ಇಬ್ಬರೂ ನನ್ನ ಫೇವರಿಟ್ ಎಂದಿದ್ದಾರೆ.

ಶ್ರದ್ಧಾ ನಾಯಿ ಆಕೆಯ ಮೂಗಿಗೆ ಮುತ್ತಿಕ್ಕುತ್ತಿರುವ ದೃಶ್ಯ ಈ ಫೋಟೊದಲ್ಲಿದ್ದು, ನಟಿಯ ಪೋಸ್ಟ್‌ಗೆ ಬಾಲಿವುಡ್ ಮಂದಿ ಲೈಕ್ ಮತ್ತು ಕಮೆಂಟ್ ಮೂಲಕ ಪ್ರೀತಿ ತೋರಿದ್ದಾರೆ.

ಸುಮಾರು 14 ಲಕ್ಷಕ್ಕೂ ಅಧಿಕ ಮಂದಿ ಶ್ರದ್ಧಾ ಪೋಸ್ಟ್ ಲೈಕ್ ಮಾಡಿದ್ದಾರೆ. ಬಾಲಿವುಡ್ ಮಂದಿಯ ಶ್ವಾನ ಪ್ರೀತಿಗೆ ಇನ್‌ಸ್ಟಾಗ್ರಾಂ ಕೂಡ ವೇದಿಕೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು