ಮಂಗಳವಾರ, ನವೆಂಬರ್ 12, 2019
28 °C

ನಟನೆಗೆ ಮರಳಿದ ಶ್ರುತಿ ಹಾಸನ್‌

Published:
Updated:
Prajavani

ನಟನೆಯಿಂದ ಕೆಲ ವರ್ಷಗಳ ಕಾಲ ಬ್ರೇಕ್‌ ಪಡೆದುಕೊಂಡಿದ್ದ ನಟಿ ಶ್ರುತಿ ಹಾಸನ್‌, ಈಗ ಆ್ಯಕ್ಷನ್‌ ಸಿನಿಮಾ ಮೂಲಕ ಸಿನಿಕ್ಷೇತ್ರಕ್ಕೆ ವಾಪಸ್ಸಾಗಿದ್ದಾರೆ. ರವಿತೇಜಾ ನಾಯಕನಾಗಿ ನಟಿಸುತ್ತಿರುವ, ಗೋಪಿಚಂದ್‌ ಮಲಿನೇನಿ ನಿರ್ದೇಶನದ ಆ್ಯಕ್ಷನ್‌ ಚಿತ್ರದಲ್ಲಿ ಇವರು ಮುಖ್ಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಚಿತ್ರದ ಚಿತ್ರೀಕರಣವು ನವೆಂಬರ್‌ ಅಂತ್ಯದಲ್ಲಿ ಆರಂಭವಾಗಲಿದೆ.

ಬ್ಯುಸಿ ನಟಿಯಾಗಿದ್ದ ಶ್ರುತಿ ಹಾಸನ್‌, ನಟನಾ ಕ್ಷೇತ್ರದಿಂದ ಕೊಂಚ ದೂರವಾಗಿದ್ದರು. 2017ರಲ್ಲಿ ಪವನ್‌ ಕಲ್ಯಾಣ್‌ ಜೊತೆ ನಟಿಸಿದ ‘ಕಾಟಮರಾಯುಡು’, ಬಾಲಿವುಡ್‌ನಲ್ಲಿ ‘ಬೆಹೆನ್‌ ಹೋಗಿ ತೇರಿ’ ಚಿತ್ರಗಳು ಇವರು ನಟಿಸಿದ ಕೊನೆಯ ಸಿನಿಮಾಗಳು. ಅನಂತರ ಕೊಂಚ ವಿರಾಮ ಪಡೆದುಕೊಂಡು ಸಂಗೀತ ಕ್ಷೇತ್ರದಲ್ಲಿ ಮುಂದುವರಿಯುವುದಾಗಿ ಹೇಳಿಕೊಂಡಿದ್ದರು. ಲಂಡನ್‌ನಲ್ಲಿ ಇದ್ದುಕೊಂಡು ಸಂಗೀತಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಈಗ ತೆಲುಗು ಸಿನಿಮಾದ ಮೂಲಕ ನಟನೆಗೆ ವಾಪಸ್ಸಾಗುತ್ತಿದ್ದಾರೆ.

ರವಿತೇಜಾ ನಟನೆಯ 66ನೇ ಸಿನಿಮಾ ಇದಾಗಿದ್ದು, ಇತ್ತೀಚೆಗೆ ಈ ಸಿನಿಮಾ ಬಗ್ಗೆ ಘೋಷಣೆ ಮಾಡಿದ್ದರು. ಈ ಚಿತ್ರದಲ್ಲಿ ನಾಯಕಿಯಾಗಿ  ನಟಿಸಲಿದ್ದಾರೆ ಎನ್ನಲಾಗಿದೆ.

ಇದು ರವಿತೇಜಾ ಜೊತೆ ಶ್ರುತಿ ಹಾಸನ್‌ ನಟಿಸುತ್ತಿರುವ ಎರಡನೇ ಚಿತ್ರ. ಈ ಹಿಂದೆ ‘ಬಲುಪು’ ಎಂಬ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಆ ಚಿತ್ರವನ್ನೂ ನಿರ್ದೇಶಿಸಿದ್ದವರು ಗೋಪಿಚಂದ್‌. ಬಾಕ್ಸ್‌ ಆಫೀಸ್‌ನಲ್ಲಿ ಚಿತ್ರ ಹಿಟ್‌ ಆಗಿತ್ತು.

ಪ್ರತಿಕ್ರಿಯಿಸಿ (+)